ಸಿಬಿಐ
ಕೋಲ್ಕತ್ತ: ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ನಡೆದಿರುವ ಅಕ್ರಮಗಳ ತನಿಖೆಯ ಭಾಗವಾಗಿ ಖಾಸಗಿ ಕಂಪನಿಯೊಂದರ ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ದಕ್ಷಿಣ ಅವೆನ್ಯೂ ಪ್ರದೇಶದಲ್ಲಿರುವ ಎಸ್. ಬಸು ರಾಯ್ ಮತ್ತು ಕಂಪನಿಯಲ್ಲಿ ಶೋಧ ನಡೆದಿದ್ದು, ಎರಡು ಸರ್ವರ್ ಹಾಗೂ ಹಾರ್ಡ್ ಡಿಸ್ಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರು ಅಧಿಕಾರಿಗಳು ಮತ್ತು ಇಬ್ಬರು ಸೈಬರ್ ಅಪರಾಧ ತಜ್ಞರನ್ನೊಳಗೊಂಡ ತಂಡವು, ನೇಮಕಾತಿ ಪರೀಕ್ಷೆಗಳಲ್ಲಿ ಬಳಸಿದ್ದ ಒಎಂಆರ್ ಶೀಟ್‌ಗಳ ಡಿಜಿಟಲ್ ಬ್ಯಾಕ್‌ಅಪ್‌ಗಳ ಪತ್ತೆಗೆ ಆದ್ಯತೆ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
2014ರಲ್ಲಿ ನಡೆದಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಸ್ಕ್ಯಾನ್ ಮಾಡಿದ ಒಎಂಆರ್ ಶೀಟ್‌ಗಳನ್ನು ಹೊಂದಿರುವ ಸರ್ವರ್‌ಗಳು, ಡಿಸ್ಕ್‌ಗಳು ಅಥವಾ ಸಂಗ್ರಹಿಸಲಾಗಿದ್ದ ಡಿಜಿಟಲ್ ಪರಿಕರಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುವಂತೆ ಕಲ್ಕತ್ತಾ ಹೈಕೋರ್ಟ್ ಕಳೆದ ವಾರ ಸಿಬಿಐಗೆ ನಿರ್ದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಎನ್‌ಐಸಿ, ವಿಪ್ರೊ, ಟಿಸಿಎಸ್, ಇನ್ಫೊಸಿಸ್‌ನ ಸಹಾಯ ಪಡೆಯುವಂತೆಯೂ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.