ನವದೆಹಲಿ: ಗಲಭೆ ಪೀಡಿತ ಈಶಾನ್ಯ ದೆಹಲಿಯ ಎಲ್ಲ ಶಾಲೆಗಳ ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್ 7ರವರೆಗೆ ಮುಂದೂಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಈಶಾನ್ಯ ದೆಹಲಿಯ ಎಲ್ಲ ಶಾಲೆಗಳು ಮಾರ್ಚ್ 7ರವರೆಗೆ ಆರಂಭವಾಗುವುದಿಲ್ಲ ಎಂದು ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಶನಿವಾರ ತಿಳಿಸಿದ್ದಾರೆ.
ಫೆಬ್ರುವರಿ 29ರವರೆಗೆ ಶಾಲೆಗಳನ್ನು ಕಾರ್ಯ ನಿರ್ವಹಿಸುವುದಿಲ್ಲವೆಂದು ಈ ಹಿಂದೆ ತಿಳಿಸಲಾಗಿತ್ತು.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಶಿಕ್ಷಣ ನಿರ್ದೇಶನಾಲಯ, ‘ಗಲಭೆ ಪೀಡಿತ ಪ್ರದೇಶದಲ್ಲಿ ಪರೀಕ್ಷೆಗಳನ್ನು ನಡೆಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ. ಇಂತಹ ಸಮಯದಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಮನಸ್ಥಿತಿ ಉದ್ವಿಗ್ನಗೊಂಡಿರುತ್ತದೆ. ಪರೀಕ್ಷೆ ಸಿದ್ದತೆ ನಡೆಸಲು ಅವರಲ್ಲಿ ಏಕಾಗೃತೆಯ ಕೊರತೆ ಇರುತ್ತದೆ. ಆ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿದೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.