ADVERTISEMENT

ನಂದಾ ದೇವಿ | ನಾಪತ್ತೆಯಾದ ಚಾರಣಿಗರ ಪತ್ತೆಗೆ ವಿಶೇಷ ತಂಡ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 4:48 IST
Last Updated 5 ಜೂನ್ 2019, 4:48 IST
   

ಪಿಥೋರ್‌ಗರ್‌:ಉತ್ತರಾಖಂಡ್‌ನ ನಂದಾ ದೇವಿ ಈಸ್ಟ್‌ ಚಾರಣ ವೇಳೆ ಕಾಣೆಯಾಗಿರುವ ವಿದೇಶಿ ಪ್ರವಾಸಿ ತಂಡದ ಪರ್ವತಾರೋಹಿಗಳ ಹುಡುಕಾಟಕ್ಕೆ ಇಂಡೋ ಟಿಬೆಟ್‌ ಗಡಿ ಭದ್ರತಾ ಪಡೆ(ಐಟಿಬಿಪಿ)ಯ ನುರಿತ ತಜ್ಞರು ಹಾಗೂ ಐವರು ವಾಯುಪಡೆಯ ಯೋಧರು ಜಂಟಿ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ನಲ್ಲಿ ಬುಧವಾರ ತೆರಳಿದ್ದಾರೆ.

ನಾಲ್ವರು ಐಟಿಬಿಪಿ ನುರಿತ ತಜ್ಞರು ಹಾಗೂ ವಾಯುಪಡೆಯ ಐವರು ಯೋಧರು ಇಂದು ಮನ್ಸೈರಿಯಿಂದ ಬೆಳಿಗ್ಗೆ 5ಕ್ಕೆ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್‌(ಎಎಂಎಚ್‌)ನಲ್ಲಿ ತೆರಳಿದರು.

ನಂದಾ ದೇವಿ ಈಸ್ಟ್‌ ಬಳಿ 18 ಸಾವಿರದಿಂದ 20 ಸಾವಿರ ಅಡಿ ಎತ್ತರದ ಸ್ಥಳಕ್ಕೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಮೂಲಕ ನುರಿತ ಪರ್ವತಾರೋಹಿಗಳ ಈ ತಂಡ ತೆರಳಿತು.

ADVERTISEMENT

ಚಾರಣಕ್ಕೆ ತೆರಳಿದ್ದವರು ನಂದಾದೇವಿ ಬೇಸ್ ಕ್ಯಾಂಪ್‌ಗೆ ಹಿಂದಿರುಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.