ADVERTISEMENT

ನೇಣಿಗೇರಿಸುವ ವ್ಯಕ್ತಿಗಾಗಿ ಹುಡುಕಾಟ

ಪಿಟಿಐ
Published 8 ಡಿಸೆಂಬರ್ 2019, 20:00 IST
Last Updated 8 ಡಿಸೆಂಬರ್ 2019, 20:00 IST
   

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿ ತಿಹಾರ್‌ ಜೈಲಿನಲ್ಲಿರುವ ಅಪರಾಧಿಗಳನ್ನು ನೇಣಿಗೆ ಏರಿಸುವ ವ್ಯಕ್ತಿಯು ಜೈಲಿನಲ್ಲಿ ಇಲ್ಲದ ಕಾರಣಕ್ಕೆ ಅಲ್ಲಿನ ಅಧಿಕಾರಿಗಳು ನೆರವಿಗಾಗಿ ಬೇರೆ ಜೈಲುಗಳ ಮೊರೆಹೋಗಿದ್ದಾರೆ ಎಂದು ತಿಳಿದುಬಂದಿದೆ.

‘ನೇಣಿಗೇರಿಸುವ ವ್ಯಕ್ತಿಯನ್ನು ಕಳುಹಿಸಿಕೊಡುವಂತೆ ಉತ್ತರ ಪ್ರದೇಶದ ಜೈಲು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದು ತಿಹಾರ್‌ ಜೈಲಿನ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಿರ್ಭಯಾ ಅವರ ಹತ್ಯೆ ಮಾಡಿದವರನ್ನು ನೇಣಿಗೇರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2018ರಲ್ಲಿ ಸುಪ್ರಿಂ ಕೋರ್ಟ್‌ ತಳ್ಳಿ ಹಾಕಿತ್ತು.

ಸಂಸತ್ತಿನ ಮೇಲೆ ನಡೆಸಿದ ದಾಳಿಯ ಸಂಚುಕೋರ ಅಫ್ಜಲ್‌ ಗುರು, ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾದ ಕೊನೆಯ ವ್ಯಕ್ತಿಯಾಗಿದ್ದಾನೆ. 2013ರ ಫೆಬ್ರುವರಿಯಲ್ಲಿ ಆತನನ್ನು ಜೈಲಿನ ಸಿಬ್ಬಂದಿಯೇ ನೇಣಿಗೇರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.