ADVERTISEMENT

ಅಜಿತ್‌ ಪವಾರ್‌–ಶರದ್ ಪವಾರ್‌ ನಡುವಿನ ಗೌಪ್ಯ ಸಭೆ ಕಳವಳಕಾರಿಯಾಗಿದೆ: ನಾನಾ ಪಟೋಲೆ

ಪಿಟಿಐ
Published 16 ಆಗಸ್ಟ್ 2023, 4:31 IST
Last Updated 16 ಆಗಸ್ಟ್ 2023, 4:31 IST
ನಾನಾ ಪಟೋಲೆ
ನಾನಾ ಪಟೋಲೆ   

ಮುಂಬೈ: ‘ಶರದ್ ಪವಾರ್ ಮತ್ತು ಅಜಿತ್ ಪವಾರ್ ಗೌಪ್ಯ ಸಭೆ ನಡೆಸುವುದನ್ನು ಕಾಂಗ್ರೆಸ್‌ ಪಕ್ಷ ಒಪ್ಪುವುದಿಲ್ಲ. ಇದು ಅತ್ಯಂತ ಕಳವಳಕಾರಿಯಾಗಿದೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ತಿಳಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಲೆ, ‘ಅಜಿತ್ ಪವಾರ್‌ ಮತ್ತು ಶರದ್ ಪವಾರ್‌ ನಡುವೆ ನಡೆಯುತ್ತಿರುವ ಗೌಪ್ಯ ಸಭೆಗಳ ಬಗ್ಗೆ ನಮಗೆ ಅಸಮಾಧಾನವಿದೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತರಲಾಗುವುದು. ಇಂಡಿಯಾ ಮೈತ್ರಿಕೂಟದ ಮುಂದಿನ ಸಭೆಯಲ್ಲೂ ಚರ್ಚಿಸಲಾಗುತ್ತದೆ.‘ ಎಂದರು.

ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ಬಿಟ್ಟು ಸ್ಪರ್ಧಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.

ADVERTISEMENT

ಎನ್‌ಸಿಪಿ(ಶರದ್‌ ಪವಾರ್‌ ಬಣ), ಕಾಂಗ್ರೆಸ್, ಶಿವಸೇನಾ(ಉದ್ಧವ್‌ ಠಾಕ್ರೆ ಬಣ) ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಭಾಗಗಳಾಗಿವೆ. ಏಕನಾಥ ಶಿಂದೆ ಬಂಡಾಯದ ನಂತರ ಮಹಾ ವಿಕಾಸ್‌ ಅಘಾಡಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತ್ತು. ಅದಾದ ಸ್ವಲ್ಪ ದಿನಗಳ ಬಳಿಕ ಅಜಿತ್‌ ಪವಾರ್‌ ಜೊತೆಗೆ ಎಂಟು ಶಾಸಕರು ಎನ್‌ಸಿಪಿ ತೊರೆದಿದ್ದರು.

ಕಳೆದ ವಾರ ಪುಣೆಯ ಕೋರೆಗಾಂವ್‌ ಪಾರ್ಕ್‌ನಲ್ಲಿ ಅಜಿತ್ ಪವಾರ್‌ ಮತ್ತು ಶರದ್ ಪವಾರ್‌ ಭೇಟಿಯಾಗಿದ್ದರು. ಇವರಿಬ್ಬರ ಭೇಟಿ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.