ADVERTISEMENT

ನಕ್ಸಲ್ ದಾಳಿ: ಕಮಾಂಡೊ ಪತ್ತೆಗಾಗಿ ಶೋಧ

ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯ ಕಾರ್ಯಾಚರಣೆ

ಪಿಟಿಐ
Published 5 ಏಪ್ರಿಲ್ 2021, 11:28 IST
Last Updated 5 ಏಪ್ರಿಲ್ 2021, 11:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಛತ್ತೀಸ್‌ಗಡದಲ್ಲಿ ಶನಿವಾರ ನಕ್ಸಲ್ ದಾಳಿಯ ನಂತರ ಕೋಬ್ರಾ ಕಮಾಂಡೊ ಅಧಿಕಾರಿಯನ್ನು ಅಪಹರಿಸಲಾಗಿದೆ ಎಂಬ ನಕ್ಸಲರ ಹೇಳಿಕೆಯನ್ನು ಪರಿಗಣಿಸಿರುವ ಭದ್ರತಾ ಸಂಸ್ಥೆಯ ಸಿಬ್ಬಂದಿ ಕಮಾಂಡೊ ಪತ್ತೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾವೊವಾದಿ ಗುಂಪೊಂದು ಕೋಬ್ರಾ ಕಮಾಂಡೊ ಅಧಿಕಾರಿಯನ್ನು ಅಪಹರಿಸಿರುವ ವಿಚಾರವನ್ನು ಭಾನುವಾರ ಸಂಜೆ ಬಿಜಾಪುರ ಮೂಲದ ಪತ್ರಕರ್ತರೊಬ್ಬರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಇದು ಅಪಹರಣವನ್ನು ನಂಬಲು ಕಾರಣವಾಗಿದೆ ಎಂದು ಭದ್ರತಾ ಸಿಬ್ಬಂದಿಯ ಮುಖ್ಯಸ್ಥರು ತಿಳಿಸಿದ್ದಾರೆ.

‘210 ನೇ ಕೋಬ್ರಾ ಬೆಟಾಲಿಯನ್‌ ಕಮಾಂಡೊ ರಾಕೇಶ್ವರ್ ಸಿಂಗ್ ಮಿನ್ಹಾಸ್ ಅವರು ನಾಪತ್ತೆಯಾಗಿದ್ದು, ಅವರನ್ನು ಇಲ್ಲಿವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಆದಾಗ್ಯೂ, ಕೆಲವು ನಕ್ಸಲರು ಕಮಾಂಡೊವನ್ನು ಅಪಹರಿಸಿದ್ದಾರೆ ಎಂದು ನಂಬುವುದಕ್ಕೂ ನಮ್ಮ ಬಳಿ ಸಮರ್ಪಕವಾದ ಪುರಾವೆಗಳಿಲ್ಲ‘ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ನಾಪತ್ತೆಯಾಗಿರುವ ಜಮ್ಮು ಮೂಲದ ಈ ಕಮಾಂಡೊ ಅವರನ್ನು ಹುಡುಕಲು ಮತ್ತು ಮಾವೊವಾದಿಗಳ ಚಲನ ವಲನದ ನಿಯಂತ್ರಿಸಲು ಭದ್ರತಾ ಪಡೆಗಳ ಅನೇಕ ಘಟಕಗಳು ಇನ್ನೂ ಅರಣ್ಯದೊಳಗೆ ತಿರುಗಾಡುತ್ತಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.