ಒಡಿಶಾದ ಪಾರಾದೀಪ್ ಬಂದರು
ಚಿತ್ರಕೃಪೆ: ಎಕ್ಸ್
ಪಾರಾದೀಪ್: ಒಡಿಶಾದ ಪಾರಾದೀಪ್ ಬಂದರಿಗೆ ಬುಧವಾರ 21 ಪಾಕಿಸ್ತಾನಿ ಸಿಬ್ಬಂದಿಯಿರುವ ಹಡಗು ಬಂದಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಒಟ್ಟು 25 ಸಿಬ್ಬಂದಿಯಿರುವ ‘MT Siren II’ ಹಡಗು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ಗಾಗಿ ಕಚ್ಚಾತೈಲ ಹೊತ್ತು ತಂದಿದೆ. ಈ ಹಡಗು ದಕ್ಷಿಣ ಕೊರಿಯಾದಿಂದ ಸಿಂಗಪುರ ಮಾರ್ಗವಾಗಿ ಒಡಿಶಾ ಬಂದರು ತಲುಪಿದೆ. ಇದರಲ್ಲಿರುವ 21 ಸಿಬ್ಬಂದಿ ಪಾಕಿಸ್ತಾನ ಪ್ರಜೆಗಳಾಗಿದ್ದಾರೆ.
ವಲಸೆ ಇಲಾಖೆ ಹಡಗಿನಲ್ಲಿ ಪಾಕಿಸ್ತಾನಿ ಸಿಬ್ಬಂದಿ ಇರುವ ಕುರಿತು ಮಾಹಿತಿ ನೀಡಿದ ಕಾರಣ ಒಡಿಶಾ ಕರಾವಳಿ ಪೊಲೀಸ್ ಮತ್ತು ಸಿಐಎಸ್ಎಫ್ ಸಿಬ್ಬಂದಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹಿನ್ನೆಲೆ ಪಾರಾದೀಪ್‌ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಹಡಗು ಸಮುದ್ರ ತೀರದಿಂದ 20ಕಿ.ಮೀ ದೂರದಲ್ಲಿ ಲಂಗರು ಹಾಕಿದ್ದು, 11,350 ಮೆಟ್ರಿಕ್ ಟನ್‌ನಷ್ಟು ಕಚ್ಚಾ ತೈಲದ ಸರಕಿದೆ. ಕಚ್ಚಾ ತೈಲವನ್ನು ಸ್ಥಳಾಂತರಿಸುವ ಸಮಯದಲ್ಲಿ ಯಾವುದೇ ಸಿಬ್ಬಂದಿ ಹಡಗಿನಿಂದ ಹೊರಬರುವಂತಿಲ್ಲ ಎಂದು ಆದೇಶಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.