
ಗುವಾಹಟಿ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಏಪ್ರಿಲ್‌ನಲ್ಲಿ ಬಂಧಿಸಲಾಗಿದ್ದ ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಅವರನ್ನು ಬಿಡುಗಡೆ ಮಾಡುವಂತೆ ಗುವಾಹಟಿ ಹೈಕೊರ್ಟ್ ಆದೇಶ ನೀಡಿದೆ. ಇಸ್ಲಾಂ ಅವರ ವಿರುದ್ಧ ಇದ್ದ ಪ್ರಕರಣವನ್ನು ನ್ಯಾಯಾಲಯ ರದ್ದು ಮಾಡಿತು.
ತಪ್ಪುದಾರಿಗೆಳೆಯುವ ಮತ್ತು ಪ್ರಚೋದನಾಕಾರಿಯಾದ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿದ ಆರೋಪದ ಮೇಲೆ ಶಾಸಕ ಇಸ್ಲಾಂ ಅವರ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಅವರ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೆಯಾಗಿತ್ತು.
‘ಬಂಧನವಾದ ಬಳಿಕ ತಮ್ಮ ಪರವಾಗಿ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕಿನ ಕುರಿತು ಅರ್ಜಿದಾರರಿಗೆ (ಶಾಸಕ ಇಸ್ಲಾಂ) ಮಾಹಿತಿಯನ್ನು ಕೂಡಲೇ ನೀಡಲಿಲ್ಲ. ಈ ಮಾಹಿತಿಯನ್ನು ಬಂಧನವಾದ 23 ದಿನಗಳ ಬಳಿಕ ನೀಡಲಾಯಿತು. ಬಂಧನವಾದ ಮೇಲೆ ಪೊಲೀಸರು ಈ ಪ್ರಕ್ರಿಯೆಯನ್ನು ಪಾಲಿಸಲಿಲ್ಲ’ ಎಂದು ಹೈಕೋರ್ಟ್ ಗುರುವಾರ ತಮ್ಮ ಆದೇಶದಲ್ಲಿ ಹೇಳಿತು.
‘ಅರ್ಜಿದಾರರ ಮೇಲಿರುವ ಪ್ರಕರಣವನ್ನು ರದ್ದು ಮಾಡಲು ಪೊಲೀಸರ ಇದೊಂದೇ ತಪ್ಪು ಸಾಕು. ನಮಗೆ ಬೇರೆ ಯಾವ ವಿಚಾರಗಳೂ ಬೇಕಿಲ್ಲ’ ಎಂದು ನ್ಯಾಯಾಲಯ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.