ADVERTISEMENT

ಸಾಧ್ವಿ ಹೇಳಿಕೆಗೆ ಸೇನಾ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:09 IST
Last Updated 23 ಏಪ್ರಿಲ್ 2019, 20:09 IST

ಮುಂಬೈ (ಪಿಟಿಐ): ಹೇಮಂತ್ ಕರ್ಕರೆ ವಿರುದ್ಧ ಹೇಳಿಕೆ ನೀಡಿರುವ ಸಾಧ್ವಿ ಅವರ ಮಾತನ್ನು ಒಪ್ಪದ ಶಿವಸೇನಾ, ಇದರಿಂದ ಪ್ರಧಾನಿ ಮೋದಿ ಅವರ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

‘ಜನರಲ್ಲಿ ರಾಷ್ಟ್ರೀಯತೆ ಪ್ರಜ್ಞೆಯನ್ನು ಜಾಗೃತಗೊಳಿಸಲು ಮೋದಿ ಅವರು ಸೈನಿಕರ ತ್ಯಾಗವನ್ನು ಜನರಿಗೆ ಅರ್ಥ ಮಾಡಿಸಲು ಮುಂದಾದರು. ಅವರು ಎನ್‌ಡಿಎ ಮೈತ್ರಿಕೂಟದ ದೊಡ್ಡ ಆಸ್ತಿ’ ಎಂದುಶಿವಸೇನಾದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಶಿವಸೇನಾ ಅಭಿಪ್ರಾಯಪಟ್ಟಿದೆ.

ಸಾಧ್ವಿಯವರ ಹೇಳಿಕೆಯನ್ನು ಸೇನಾ ಒಪ್ಪುವುದಿಲ್ಲವಾದರೂ, ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯ ವೇಳೆ ಅವರಿಗೆ ಪಕ್ಷ ಬೆಂಬಲ ನೀಡಿತ್ತು ಎಂದು ತಿಳಿಸಿದೆ.

ADVERTISEMENT

‘ಹಿಂದೂ ಭಯೋತ್ಪಾದನೆ ಎಂಬುದನ್ನು ಒಪ್ಪುವುದಿಲ್ಲ. ಹಿಂದೂಗಳು ದೂಷಣೆಗೆ ಒಳಗಾಗಬಾರದು. ರಾಜಕೀಯ ಒತ್ತಡದಿಂದ ತನಿಖೆಯು ನಡೆಯುತ್ತಿದೆ ಎಂದು ಮೊದಲು ಹೇಳಿದ್ದು ನಾವು. ಸಾಮ್ನಾಪತ್ರಿಕೆ ಮಾತ್ರ ಸಾಧ್ವಿ ಹಾಗೂ ಮತ್ತೊಬ್ಬ ಆರೋಪಿ ಪುರೋಹಿತ್ ಅವರ ಬೆಂಬಲಕ್ಕೆ ನಿಂತಿತ್ತು’ ಎಂದು ಉಲ್ಲೇಖಿಸಲಾಗಿದೆ.

‘ಕರ್ಕರೆ ಅವರನ್ನು ರಾಷ್ಟ್ರವಿರೋಧಿ ಎಂದು ಕರೆಯುವುದು ಇಡೀ ಹುತಾತ್ಮ ಸಮೂಹಕ್ಕೆ ಮಾಡಿದಅಪಮಾನ’ ಎಂದು ಸಾಮ್ನಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.