ಮುಂಬೈ: ಕರ್ನಾಟಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ತೆರವುಗೊಳಿಸಿರುವ ಕುರಿತು ಬಿಜೆಪಿಯಲ್ಲಿರುವ ಶಿವಾಜಿ ಭಕ್ತರು ಮೌನತಳೆದಿರುವುದೇಕೇ ಎಂದು ಶಿವಸೇನೆ ಪ್ರಶ್ನಿಸಿದೆ. ‘ಇಂಥ ಕಪಟ ಭಕ್ತಿಯಾದರೂ ಏಕೆ’ ಎಂದು ಅದು ವ್ಯಂಗ್ಯವಾಡಿದೆ.
ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ, ಶ್ರೀರಾಮಮಂದಿರ ಭೂಮಿಪೂಜೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಜಿ ಅವರನ್ನು ಸ್ಮರಿಸಿದ್ದರು ಎಂದು ಉಲ್ಲೇಖಿಸಿದೆ.
ಬೆಳಗಾವಿ ಜಿಲ್ಲೆಯ ಮಂಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜ್ ಅವರ ಪ್ರತಿಮೆಯನ್ನು ಬಾಬರಿ ಮಸೀದಿ ತೆರವುಗೊಳಿಸಿದಂತೆ ತೆಗೆಯಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಕರ್ನಾಟಕದ ಮುಖ್ಯಮಂತ್ರಿ ಈ ಘಟನೆಯನ್ನು ಖಂಡಿಸಿಯೂ ಇಲ್ಲ. ರಾತ್ರೋರಾತ್ರಿ ಪ್ರತಿಮೆ ತೆಗೆದಿರುವುದು ಖಂಡನೀಯ. ಹೆಚ್ಚು ಆತಂಕ ಮೂಡಿಸುವ ಸಂಗತಿ ಎಂದರೆ ಮಹಾರಾಷ್ಟ್ರ ಬಿಜೆಪಿಯಲ್ಲಿರುವ ಶಿವಾಜಿ ಭಕ್ತರ ಮೌನ ಎಂದು ದೂರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.