ADVERTISEMENT

ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್‌ಗೆ ಕೋವಿಡ್ ದೃಢ

ಪಿಟಿಐ
Published 28 ಡಿಸೆಂಬರ್ 2021, 10:29 IST
Last Updated 28 ಡಿಸೆಂಬರ್ 2021, 10:29 IST
ಡೆರೆಕ್ ಓಬ್ರಿಯಾನ್
ಡೆರೆಕ್ ಓಬ್ರಿಯಾನ್   

ಕೋಲ್ಕತ್ತ: ‘ನನಗೆ ಕೋವಿಡ್‌–19 ಇರುವುದು ದೃಢಪಟ್ಟಿದ್ದು. ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿದ್ದೇನೆ’ ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹಿರಿಯ ನಾಯಕ, ಸಂಸದ ಡೆರೆಕ್ ಓಬ್ರಿಯಾನ್ ಮಂಗಳವಾರ ಹೇಳಿದ್ದಾರೆ.

‘ಕಳೆದ ಮೂರು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು ಮತ್ತು ರೋಗಲಕ್ಷಣಗಳನ್ನು ಹೊಂದಿರುವವರು ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ’ ಎಂದೂ ಡೆರೆಕ್ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT