ADVERTISEMENT

ರೈಲು ಟಿಕೆಟ್ ಆನ್‌ಲೈನ್‌ ಬುಕಿಂಗ್‌ಗೆ ನಾಳೆಯಿಂದ ಸೇವಾ ಶುಲ್ಕ

ನಾನ್‌ ಎಸಿ ಕೋಚ್‌ನ ಪ್ರತಿ ಸೀಟ್‌ಗೆ ₹ 15, ಎಸಿ ಕೋಚ್‌ನ ಪ್ರತಿ ಸೀಟ್‌ಗೆ ₹ 30 ಶುಲ್ಕ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 11:07 IST
Last Updated 31 ಆಗಸ್ಟ್ 2019, 11:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ರೈಲು ಟಿಕೆಟ್ ಆನ್‌ಲೈನ್‌ ಬುಕಿಂಗ್‌ಗೆ ಸೇವಾ ಶುಲ್ಕವೂ ಸೇರಿದಂತೆ ಇತರ ಸೇವಾ ಶುಲ್ಕಗಳು, ದಂಡ, ತೆರಿಗೆ ಕಡಿತ ಮುಂತಾದಜನ ಜೀವನದ ಮೇಲೆ ಪರಿಣಾಮ ಬೀರುವಂತಹ ಪ್ರಮುಖ ನಿರ್ಧಾರಗಳು ಭಾನುವಾರದಿಂದ (ಸೆಪ್ಟೆಂಬರ್ 1)ಜಾರಿಗೆ ಬರಲಿವೆ.

ಹೊಸ ನಿಯಮದ ಪ್ರಕಾರ,ನಾನ್‌ ಎಸಿ ಕೋಚ್‌ನ ಪ್ರತಿ ಸೀಟ್‌ ಆನ್‌ಲೈನ್ ಮೂಲಕ ಕಾಯ್ದಿರಿಸಲು₹ 15 ಸೇವಾ ಶುಲ್ಕ ಭರಿಸಬೇಕಾಗುತ್ತದೆ. ಹಾಗೆಯೇ, ಎಸಿ ಕೋಚ್‌ನ ಪ್ರತಿ ಸಿಟುಕಾಯ್ದಿರಿಸುವಿಕೆಗೆ₹ 30 ಶುಲ್ಕ ಭರಿಸಬೇಕಾಗಲಿದೆ.

ಇತರ ನಿರ್ಧಾರಗಳು

*ಶೇ 2ರಷ್ಟು ಟಿಡಿಎಸ್ – ಬ್ಯಾಂಕ್‌ ಖಾತೆಯಿಂದ ₹ 1 ಕೋಟಿಗಿಂತ ಅಧಿಕ ನಗದು ಪಡೆದರೆ

* 5% ಟಿಡಿಎಸ್ – ಮದುವೆ ಮತ್ತಿತರ ಸಮಾರಂಭಗಳಲ್ಲಿ ಗುತ್ತಿಗೆದಾರರು ಅಥವಾ ವೃತ್ತಿಪರರಿಗೆ ವಾರ್ಷಿಕ ಪಾವತಿ ಮೊತ್ತ ₹ 50 ಲಕ್ಷ ಮೀರಿದರೆ

* ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ ನಿಯಮಗಳ ಉಲ್ಲಂಘನೆಗೆ ದುಬಾರಿ ದಂಡ

* ಎಸ್‌ಬಿಐನ ರೆಪೊ ದರ ಆಧರಿಸಿದ ಗೃಹ, ವಾಹನ ಸಾಲದ ಬಡ್ಡಿದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.