ADVERTISEMENT

ಮುನ್ನಾಭಾಯ್ ಎಂಬಿಬಿಎಸ್ ನೆನಪಿಸಿದ ಬಾಂಬೆ ಹೈಕೋರ್ಟ್‌

ಪಿಟಿಐ
Published 17 ನವೆಂಬರ್ 2023, 16:10 IST
Last Updated 17 ನವೆಂಬರ್ 2023, 16:10 IST
ಬಾಂಬೆ ಹೈಕೋರ್ಟ್‌ 
ಬಾಂಬೆ ಹೈಕೋರ್ಟ್‌    

ಮುಂಬೈ: ವೈದ್ಯಕೀಯ ಕೋರ್ಸ್‌ಗಳ ಪರೀಕ್ಷೆಗಳಲ್ಲಿ ಹಲವು ಅಭ್ಯರ್ಥಿಗಳು ಅಕ್ರಮ ನಡೆಸುತ್ತಾರೆ. ಇದು ‘ಮುನ್ನಾಭಾಯ್ ಎಂಬಿಬಿಎಸ್’ ಸಿನಿಮಾವನ್ನು ನೆನಪಿಸುವಂತಿದೆ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಹೇಳಿದೆ.

ಅಗತ್ಯ ದಾಖಲೆಪತ್ರ ಇಲ್ಲದಿದ್ದ ಕಾರಣಕ್ಕೆ ನೀಟ್ ಪರೀಕ್ಷೆಗೆ ಹಾಜರಾಗಲು ಅವಕಾಶ ಸಿಗದಿದ್ದ ಶ್ಯಾಮಸುಂದರ ಪಾಟೀಲ್ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಕೋರ್ಟ್ ಈಚೆಗೆ ಈ ಮಾತು ಹೇಳಿದೆ.

ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗೆ ಪ್ರವೇಶಕ್ಕೆ ತಮಗೆ ನೀಟ್ ಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಆದೇಶಿಸಬೇಕು ಎಂದು ಪಾಟೀಲ್ ಅವರು ಕೋರಿದ್ದರು. ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಆರ್‌.ವಿ. ಘುಗೆ ಮತ್ತು ವೈ.ಜಿ. ಖೊಬ್ರಗಡೆ ಅವರಿದ್ದ ಪೀಠ ನಡೆಸಿತ್ತು.

ADVERTISEMENT

ವೈದ್ಯಕೀಯ ಮಂಡಳಿ ನೀಡುವ ಶಾಶ್ವತ ನೋಂದಣಿ ಪ್ರಮಾಣಪತ್ರದ ಭೌತಿಕ ಪ್ರತಿಯನ್ನು ಹೊಂದಿರದಿದ್ದ ಕಾರಣ ಪಾಟೀಲ್ ಅವರಿಗೆ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.