ADVERTISEMENT

ತನಿಖಾ ಸಮಿತಿಗೆ ಸಿಜೆಐ ಹಾಜರ್

ಪಿಟಿಐ
Published 2 ಮೇ 2019, 10:34 IST
Last Updated 2 ಮೇ 2019, 10:34 IST
ರಂಜನ್ ಗೊಗೊಯಿ
ರಂಜನ್ ಗೊಗೊಯಿ   

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯಿ, ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸಂಬಂಧ ಬುಧವಾರ ಆಂತರಿಕ ತನಿಖಾ ಸಮಿತಿ ಎದುರು ಹಾಜರಾದರು.

ಇಂತಹ ಪ್ರಕರಣದಲ್ಲಿ ಸಿಜೆಐ ಒಬ್ಬರು ತನಿಖಾ ಸಮಿತಿ ಎದುರು ಹಾಜರಾಗಿದ್ದು ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ತನಿಖಾ ಸಮಿತಿಗೆ ಹಾಜರ್ ಆಗುವಂತೆಸಿಜೆಐ ಅವರಿಗೆ ಮನವಿ ಪತ್ರ ಕಳುಹಿಸಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಅವರು ಸಮಿತಿ ಸದಸ್ಯರ ಬಳಿ ಹಾಜರಾದರು’ ಎಂದು ಮೂಲಗಳು ಹೇಳಿವೆ.

ADVERTISEMENT

ಸಿಜೆಐ ವಿರುದ್ಧ ಆರೋಪ ಮಾಡಿರುವ ಮಹಿಳೆ, ‘ಸಮಿತಿಯಿಂದ ನ್ಯಾಯ ಸಿಗುವುದಿಲ್ಲ ಎನ್ನುವ ಭಾವನೆ ಬಂದಿದೆ. ಜತೆಗೆ ವಕೀಲರನ್ನು ಕರೆದೊಯ್ಯಲು ಅನುಮತಿ ನೀಡುತ್ತಿಲ್ಲ. ಇದರಿಂದಾಗಿಇನ್ನು ಮುಂದೆ ತನಿಖಾ ಸಮಿತಿ ಎದುರು ಹಾಜರಾಗುವುದಿಲ್ಲ’ ಎಂದು ಮಂಗಳವಾರ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದ ಪ್ರಕಟಣೆಯಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.