ADVERTISEMENT

ಎಸ್‌ಎಫ್‌ಐ ಪ್ರತಿಭಟನೆ: ಕೇರಳ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನ ಪರಿಸ್ಥಿತಿ

ಪಿಟಿಐ
Published 10 ಫೆಬ್ರುವರಿ 2026, 15:53 IST
Last Updated 10 ಫೆಬ್ರುವರಿ 2026, 15:53 IST
ಕೇರಳ ವಿಶ್ವ‌ವಿದ್ಯಾಲಯದ ಒಳಗೆ ಪ್ರವೇಶಿಸಲು ಯತ್ನಿಸಿದ ಎಸ್‌ಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸರು ಜಲಪಿರಂಗಿ ಪ್ರಯೋಗ ಮಾಡಿದರು – ಪಿಟಿಐ ಚಿತ್ರ 
ಕೇರಳ ವಿಶ್ವ‌ವಿದ್ಯಾಲಯದ ಒಳಗೆ ಪ್ರವೇಶಿಸಲು ಯತ್ನಿಸಿದ ಎಸ್‌ಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸರು ಜಲಪಿರಂಗಿ ಪ್ರಯೋಗ ಮಾಡಿದರು – ಪಿಟಿಐ ಚಿತ್ರ    

ತಿರುವನಂತಪುರ: ಕಲಾ ಉತ್ಸವ ಆಯೋಜಿಸಲು ಕುಲಪತಿ ಅನುಮತಿ ನಿರಾಕರಿಸಿರುವುದನ್ನು ವಿರೋಧಿಸಿ ಎಸ್ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಕೇರಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಜಲಪಿರಂಗಿ ಮತ್ತು ಬ್ಯಾರಿಕೇಡ್‌ ಮೂಲಕ ಪೊಲೀಸರು ತಡೆಯಲು ಯತ್ನಿಸಿದರೂ ಮುನ್ನುಗ್ಗಿದ ಎಸ್‌ಎಫ್‌ಐ ಕಾರ್ಯಕರ್ತರು ವಿ.ವಿ ಕುಲಪತಿ ಮತ್ತು ಕುಲಸಚಿವರ ಕಚೇರಿಯ ಕಟ್ಟಡದೊಳಗೆ ಪ್ರವೇಶಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಕುಲಪತಿ ವಿರುದ್ಧ ಸೋಮವಾರದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಎಸ್‌ಎಫ್‌ಐ ಮಂಗಳವಾರ ಮೆರವಣಿಗೆ ನಡೆಸಿತು.

ADVERTISEMENT

ಆಡಳಿತರೂಢ ಸಿಪಿಐನ ವಿದ್ಯಾರ್ಥಿ ಘಟಕವಾಗಿರುವ ಎಸ್‌ಎಫ್‌ಐ ತಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.