ADVERTISEMENT

ರಾಜಕೀಯ ಕಾರ್ಯಕರ್ತರು ಸಿದ್ಧಾಂತದ ಬಗ್ಗೆ ದೃಢವಾಗಿರಬೇಕು: ಶರದ್‌ ಪವಾರ್‌

ಪಿಟಿಐ
Published 12 ಡಿಸೆಂಬರ್ 2020, 11:27 IST
Last Updated 12 ಡಿಸೆಂಬರ್ 2020, 11:27 IST
ಶರದ್‌ ಪವಾರ್‌
ಶರದ್‌ ಪವಾರ್‌   

ಮಹಾರಾಷ್ಟ್ರ: ರಾಜಕೀಯ ಕಾರ್ಯಕರ್ತರು ಎಂದಿಗೂ ಸಿದ್ಧಾಂತದ ಬಗ್ಗೆ ರಾಜಿ ಮಾಡಿಕೊಳ್ಳಬಾರದು ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹೇಳಿದ್ದಾರೆ.

ಶನಿವಾರ ತಮ್ಮ 80ನೇ ಹುಟ್ಟುಹಬ್ಬದಂದು ನಗರದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹೊಸ ತಲೆಮಾರಿನ ರಾಜಕೀಯ ಕಾರ್ಯಕರ್ತರು ಮತ್ತು ನಾಯಕರನ್ನು ರೂಪಿಸುವುದು ಭವಿಷ್ಯದಲ್ಲಿ ರಾಜ್ಯ ಮತ್ತು ದೇಶವನ್ನು ಬಲಪಡಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದರು.

‘ರಾಜಕೀಯ ಕಾರ್ಯಕರ್ತರು ತಮ್ಮ ಸಿದ್ಧಾಂತದ ಬಗ್ಗೆ ದೃಢವಾಗಿರುವುದು ಬಹಳ ಮುಖ್ಯ. ಮಹಾತ್ಮ ಜ್ಯೋತಿಬಾ ಫುಲೆ, ಬಿ.ಆರ್‌.ಅಂಬೇಡ್ಕರ್‌ ಅವರ ಪ್ರಗತಿಪರ ಸಿದ್ಧಾಂತವು ಯುವ ಪೀಳಿಗೆಗೆ ಆದರ್ಶ’ ಎಂದು ಸಲಹೆ ನೀಡಿದರು.

ADVERTISEMENT

‘ಸಾಮಾಜಿಕ ಸುಧಾರಣಾವಾದಿಗಳಾದ ಫುಲೆ ಮತ್ತು ಅಂಬೇಡ್ಕರ್ ಅವರು ಜನರ ಸಾಮಾಜಿಕ ಉನ್ನತಿಗಾಗಿ ಕೆಲಸ ಮಾಡುವಾಗ ವೈಜ್ಞಾನಿಕ ಮನೋಭಾವವನ್ನು ಬಳಸಿದ್ದಾರೆ. ಅವರನ್ನು ನೆನಪಿಸಿಕೊಂಡರೆ ಸಾಕಾಗುವುದಿಲ್ಲ. ಅವರ ಆದರ್ಶಗಳನ್ನು ಪಾಲಿಸುವುದು ಮುಖ್ಯ’ ಎಂದರು.

ಕಾರ್ಯಕ್ರಮದಲ್ಲಿ ಗಣ್ಯರು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.