
ನವದೆಹಲಿ: ಬಿಹಾರದಲ್ಲಿ ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿರುವುದಕ್ಕೆ ಮತ್ತು ದೇಶಕ್ಕೆ ಇತರ ಹಲವು ಕೊಡುಗೆ ನೀಡಿರುವುದಕ್ಕೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಅವರ ಸಚಿವಾಲಯವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಮಂಗಳವಾರ ಶ್ಲಾಘಿಸಿದ್ದಾರೆ.
‘ನಳಂದ ವಿ.ವಿಯಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಭಾಗಿಯಾಗಿದ್ದ ನನಗೆ ಅಲ್ಲಿನ ವಾತವರಣ ಇಷ್ಟವಾಯಿತು. ಇದಕ್ಕಾಗಿ ಜೈಶಂಕರ್ ಮತ್ತು ಭಾರತದ ರಾಜತಾಂತ್ರಿಕರನ್ನು ಅಭಿನಂದಿಸುತ್ತೇನೆ. ವಿದೇಶಾಂಗ ಇಲಾಖೆ ದೇಶಕ್ಕೆ ನೀಡಿದ ಕೊಡುಗೆಗಳಲ್ಲಿ ಇದು ಮಹತ್ವದ್ದಾಗಿದೆ’ ಎಂದು ಸಂಸದ ತರೂರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಾನು ಬಿಹಾರಕ್ಕೆ ಇಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿಯಲು ಬಂದಿದ್ದೇನೆ. ರಾಜಕೀಯ ಕಾರಣಕ್ಕೆ ಅಲ್ಲ. ಬಿಹಾರ ವಸ್ತುಸಂಗ್ರಹಾಲಯ ಮತ್ತು ಬಾಪೂ ಗೋಪುರವನ್ನು ನೋಡುವಂತೆ ಇತರರಿಗೆ ಸಲಹೆ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.
ತರೂರ್ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪರವಾಗಿ ಹಾಗೂ ತಮ್ಮ ಪಕ್ಷ ಮತ್ತು ನಾಯಕರ ಸಿದ್ಧಾಂತಗಳಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.