ಶಿಬು ಸೊರೇನ್
–ಪಿಟಿಐ ಚಿತ್ರ
ರಾಂಚಿ: ಖ್ಯಾತ ಬುಡಕಟ್ಟು ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಶಿಬು ಸೊರೇನ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಜಾರ್ಖಂಡ್ ವಿಧಾನಸಭೆಯಲ್ಲಿ ಗುರುವಾರ ಗೊತ್ತುವಳಿ ಅಂಗೀಕರಿಸಲಾಯಿತು.
ಸಾರಿಗೆ ಸಚಿವ ದೀಪಕ್ ಬಿರುವ ಮಂಡಿಸಿದ ಗೊತ್ತುವಳಿಗೆ ಧ್ವನಿಮತದ ಅಂಗೀಕಾರ ಲಭಿಸಿತು.
ಜಾರ್ಖಂಡ್‌ನ ಆಡಳಿತರೂಢ ಜೆಎಂಎಂ ಪಕ್ಷದ ಸ್ಥಾಪಕರಾಗಿರುವ ಶಿಬು ಸೊರೇನ್ ಅವರು 2025ರ ಆಗಸ್ಟ್ 4ರಂದು ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿದ್ದರು. ಅವರಿಗೆ 81 ವರ್ಷವಾಗಿತ್ತು.
ಈ ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ಜಾರ್ಖಂಡ್ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.