ADVERTISEMENT

ಶಿವಸೇನಾ ಚಿಹ್ನೆ ವಿವಾದ: ಎರಡೂ ಬಣಗಳಿಗೂ ಸಿಗದ 'ಬಿಲ್ಲು–ಬಾಣ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2022, 16:13 IST
Last Updated 8 ಅಕ್ಟೋಬರ್ 2022, 16:13 IST
   

ನವದೆಹಲಿ: ಶಿವಸೇನಾದ ಚಿಹ್ನೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉದ್ಧವ್‌ ಠಾಕ್ರೆ ಬಣಗಳ ನಡುವೆ ಏರ್ಪಟ್ಟಿರುವ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ ಶನಿವಾರ ಮಧ್ಯಂತರ ಆದೇಶ ಹೊರಡಿಸಿದೆ. ಎರಡೂ ಬಣಗಳೂ ಶಿವಸೇನಾದ ಚಿಹ್ನೆಯಾದ ‘ಬಿಲ್ಲು–ಬಾಣ’ದ ಗುರುತನ್ನು ಬಳಸದಂತೆ ಸೂಚಿಸಲಾಗಿದೆ.

‘ಶಿವಸೇನಾ‘ಗಾಗಿ ಕಾಯ್ದಿರಿಸಲಾಗಿರುವ ‘ಬಿಲ್ಲು ಮತ್ತು ಬಾಣ’ದ ಗುರುತನ್ನು ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಬಳಸಲು ಎರಡೂ ಗುಂಪುಗಳಿಗೆ ಅನುಮತಿ ನಿರಾಕರಿಸಲಾಗಿದೆ’ ಎಂದು ಚುನಾವಣಾ ಆಯೋಗ ಹೇಳಿದೆ.

ಪ್ರಸ್ತುತ ಉಪ-ಚುನಾವಣೆಗಾಗಿ ಚುನಾವಣಾ ಆಯೋಗವು ಸೂಚಿಸಿದ ಮುಕ್ತ ಚಿಹ್ನೆಗಳ ಪಟ್ಟಿಯಿಂದ ಆಯ್ಕೆ ಮಾಡಿದ ವಿಭಿನ್ನ ಚಿಹ್ನೆಗಳನ್ನು ಎರಡೂ ಗುಂಪುಗಳಿಗೆ ನೀಡಲಾಗುತ್ತದೆ. ಆದ್ದರಿಂದ, ಅಕ್ಟೋಬರ್ 10ರ ಮಧ್ಯಾಹ್ನ 1ರ ಒಳಗಾಗಿ ಎರಡೂ ಬಣಗಳು ತಮ್ಮ ಆಯ್ಕೆಯ ಗುರುತನ್ನು ತಿಳಿಸಲು ಸೂಚಿಸಲಾಗಿದೆ.

ADVERTISEMENT

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.