ADVERTISEMENT

ಅತಿಕ್ರಮಣ ಆರೋಪ: ಶಿವಸೇನಾ ಕಚೇರಿ ಧ್ವಂಸ

ಪಿಟಿಐ
Published 20 ನವೆಂಬರ್ 2022, 14:09 IST
Last Updated 20 ನವೆಂಬರ್ 2022, 14:09 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಠಾಣೆ : ಅತಿಕ್ರಮಣವಾಗಿ ನಿರ್ಮಿಸಲಾಗಿದ್ದ ಶಿವಸೇನಾ (ಉದ್ಧವ್ ಬಾಳಾಸಾಹೇಬ್‌ ಠಾಕ್ರೆ) ಸ್ಥಳೀಯ ಕಚೇರಿಯನ್ನು ಠಾಣೆ ಜಿಲ್ಲೆಯ ಕಲ್ಯಾಣ್‌–ಡೊಂಬಿವಲಿ ಪಾಲಿಕೆಯು ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿದೆ.

‘ಸರ್ಕಾರಿ ಜಾಗದಲ್ಲಿ ಶಿವಸೇನಾ ಪಕ್ಷದ ಸ್ಥಳೀಯ ಕಚೇರಿ ಸೇರಿ 8 ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಇವುಗಳನ್ನು ಧ್ವಂಸಗೊಳಿಸಲಾಯಿತು’ ಎಂದು ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ಮುಖಂಡ ರಮಾಕಾಂತ್‌ ದೇವ್ಲೆಕರ್‌, ‘ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣಕ್ಕೆ ಸೇರಲು ನಿರಾಕರಿಸಿದ ಕಾರಣ ಧ್ವಂಸ ಕಾರ್ಯಾಚರಣೆ ನಡೆದಿದೆ. ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಇತರೆ ಕಟ್ಟಡಗಳನ್ನು ಧ್ವಂಸ ಮಾಡಿಲ್ಲ’ ಎಂದು ಆರೋಪಿಸಿದ್ದಾರೆ.

ADVERTISEMENT

ಪಾಲಿಕೆ ಅಧಿಕಾರಿಗಳ ಕ್ರಮದ ವಿರುದ್ಧ ಉದ್ಧವ್‌ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.