ADVERTISEMENT

ಮೊದಲೇ ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಬೇಕಿತ್ತು: ಧನಂಜಯ ಬಗ್ಗೆ ಪಂಕಜಾ ಮಾತು

ಪಿಟಿಐ
Published 4 ಮಾರ್ಚ್ 2025, 12:30 IST
Last Updated 4 ಮಾರ್ಚ್ 2025, 12:30 IST
<div class="paragraphs"><p>ಪಂಕಜಾ ಮುಂಡೆ ಮತ್ತು&nbsp;ಧನಂಜಯ ಮುಂಡೆ</p></div>

ಪಂಕಜಾ ಮುಂಡೆ ಮತ್ತು ಧನಂಜಯ ಮುಂಡೆ

   

–ಪಿಟಿಐ ಚಿತ್ರಗಳು

ನಾಗ್ಪುರ: ಸರಪಂಚ್‌ ಸಂತೋಷ್‌ ದೇಶಮುಖ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಸಿಪಿ ನಾಯಕ ಧನಂಜಯ ಮುಂಡೆ ಅವರು ಮೊದಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಬೇಕಿತ್ತು ಎಂದು ಸೋದರ ಸಂಬಂಧಿ, ಸಚಿವೆ ಪಂಕಜಾ ಮುಂಡೆ ಹೇಳಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಧನಂಜಯ ಮುಂಡೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದನ್ನು ನಾನು ಸ್ವಾಗತಿಸುತ್ತೇನೆ. ಅವರು (ಧನಂಜಯ ಮುಂಡೆ) ಈ ಹಿಂದೆಯೇ ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಬೇಕಿತ್ತು’ ಎಂದು ಹೇಳಿದ್ದಾರೆ.

ಧನಂಜಯ ಮುಂಡೆ ನೀಡಿದ ಹೇಳಿಕೆಯ ಬಗ್ಗೆ ನನಗೆ ತಿಳಿದಿಲ್ಲ. ಯಾವುದೇ ವ್ಯಕ್ತಿಯು ತಮ್ಮ ಕುಟುಂಬದ ಸದಸ್ಯರೊಬ್ಬರು ಈ ರೀತಿಯ ದುಃಖವನ್ನು ಅನುಭವಿಸಲು ಬಯಸುವುದಿಲ್ಲ ಎಂದು ಪಂಕಜಾ ತಿಳಿಸಿದ್ದಾರೆ.

‘ಸಂತೋಷ್ ದೇಶಮುಖ್ ಕುಟುಂಬದ ನೋವಿಗೆ ಹೋಲಿಸಿದರೆ ರಾಜೀನಾಮೆ ನಿರ್ಧಾರ ಏನೂ ಅಲ್ಲ. ತಡವಾದರೂ ಅವರು (ಧನಂಜಯ ಮುಂಡೆ) ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ’ ಎಂದು ಪಂಕಜಾ ಹೇಳಿದ್ದಾರೆ.

2024ರ ಡಿಸೆಂಬರ್ 9ರಂದು ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ಸಂತೋಷ್‌ ದೇಶಮುಖ್ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು.

ಸರಪಂಚ್‌ ಸಂತೋಷ್ ದೇಶಮುಖ್‌ ಕೊಲೆ ಪ್ರಕರಣದಲ್ಲಿ ತಮ್ಮ ಆಪ್ತನ ಹೆಸರು ಕೇಳಿ ಬಂದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಧನಂಜಯ ಮುಂಡೆ ಅವರು ಇಂದು (ಮಂಗಳವಾರ) ರಾಜೀನಾಮೆ ಸಲ್ಲಿಸಿದ್ದಾರೆ.

ದೇಶಮುಖ್‌ ಕೊಲೆ ಪ್ರಕರಣದಲ್ಲಿ ಧನಂಜಯ ಅವರ ಆಪ್ತ ವಾಲ್ಮಿಕ್‌ ಕರಾಡ್‌ ಅವರನ್ನು ಪ್ರಮುಖ ಆರೋಪಿ ಎಂದು ಸಿಐಡಿ ಹೆಸರಿಸಿತ್ತು. ಧನಂಜಯ ಅವರ ರಾಜೀನಾಮೆಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ಅದನ್ನು ರಾಜ್ಯಪಾಲರಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.