ADVERTISEMENT

ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣ: 'ಲವ್‌ ಜಿಹಾದ್‌' ಕೋನದಲ್ಲಿ ತನಿಖೆಗೆ ಒತ್ತಾಯ

ಪಿಟಿಐ
Published 15 ನವೆಂಬರ್ 2022, 9:35 IST
Last Updated 15 ನವೆಂಬರ್ 2022, 9:35 IST
ಮುಂಬೈ: ದೆಹಲಿಯ ಶ್ರದ್ಧಾ ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕ ರಾಮ್‌ ಖದಮ್‌ ಮತ್ತು ಅವರ ಬೆಂಬಲಿಗರು | ಪಿಟಿಐ ಚಿತ್ರ
ಮುಂಬೈ: ದೆಹಲಿಯ ಶ್ರದ್ಧಾ ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕ ರಾಮ್‌ ಖದಮ್‌ ಮತ್ತು ಅವರ ಬೆಂಬಲಿಗರು | ಪಿಟಿಐ ಚಿತ್ರ   

ಮುಂಬೈ: ಮುಂಬೈ ಸಮೀಪದ ವಸೈ ನಿವಾಸಿ ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 'ಲವ್‌ ಜಿಹಾದ್‌' ಕೋನದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿ ದೆಹಲಿ ಪೊಲೀಸರಿಗೆ ಬಿಜೆಪಿ ಶಾಸಕ ರಾಮ್‌ ಕದಮ್‌ ಮಂಗಳವಾರ ಪತ್ರ ಬರೆದಿದ್ದಾರೆ.

ಘಾಟ್ಕೋಪರ್‌ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ ಮುಂಬೈ ಶಾಸಕ ಕದಮ್‌ ಮತ್ತು ಅವರ ಬೆಂಬಲಿಗರು ಬಂಧಿತ ಕೊಲೆ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾ ವಿರುದ್ಧ ಘೋಷಣೆಗಳನ್ನು ಕೂಗಿದರು.

ಶ್ರದ್ಧಾ ಕೊಲೆ ಪ್ರಕರಣವನ್ನು 'ಲವ್‌ ಜಿಹಾದ್‌' ಸಾಧ್ಯತೆಗಳು ಇರಬಹುದಾದ ಕೋನದಲ್ಲಿ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಪತ್ರ ಬರೆಯುತ್ತೇನೆ. ಈ ಕೃತ್ಯದ ಹಿಂದೆ ಯಾವುದಾದರೂ ಸಂಘಟನೆ ಅಥವಾ ಗುಂಪು ಇದೆಯೇ? ಶತ್ರು ರಾಷ್ಟ್ರದ ಪಾತ್ರವಿದೆಯೇ? ಇದನ್ನೆಲ್ಲ ತನಿಖೆ ನಡೆಸಬೇಕು ಎಂದು ರಾಮ್‌ ಕದಮ್‌ ಹೇಳಿದ್ದಾರೆ.

ADVERTISEMENT

'ಲವ್‌ ಜಿಹಾದ್‌' ಎಂಬುದು ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ವಿವಾಹವಾಗುವ ಮೂಲಕ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಲು ಬಲಪಂಥೀಯ ಗುಂಪುಗಳು ಮತ್ತು ಹೋರಾಟಗಾರರು ಬಳಸುವ ಪದವಾಗಿದೆ.

ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್‌ ಪ್ರೇಯಸಿ ಶ್ರದ್ಧಾಳ ಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಎಸೆದಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.