ADVERTISEMENT

ಅಮೆರಿಕಕ್ಕೆ 32.4 ಲಕ್ಷ ಡೋಸ್‌ ಲಸಿಕೆ ರಫ್ತು: ಅನುಮೋದನೆ ಕೋರಿದ ಎಸ್‌ಐಐ

ಪಿಟಿಐ
Published 30 ಜೂನ್ 2022, 14:42 IST
Last Updated 30 ಜೂನ್ 2022, 14:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌ ಲಸಿಕೆ ಕೋವೊವ್ಯಾಕ್ಸ್‌ನ 32.4 ಲಕ್ಷ ಡೋಸ್‌ಗಳನ್ನು ‘ನುವಾಕ್ಸೊವಿಡ್’ ಹೆಸರಿನಲ್ಲಿ ಅಮೆರಿಕಕ್ಕೆ ರಫ್ತು ಮಾಡಲು ಅನುಮೋದನೆ ನೀಡುವಂತೆ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಕೇಂದ್ರ ಸರ್ಕಾರವನ್ನು ಕೋರಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಭಾರತದಲ್ಲಿ ತಯಾರಿಸಿ ಅಮೆರಿಕಕ್ಕೆ ರಫ್ತು ಮಾಡುತ್ತಿರುವ ಕೋವಿಡ್‌ ಅಥವಾ ಕೋವಿಡೇತರ ಮೊದಲ ಲಸಿಕೆ ಇದಾಗಲಿದೆ ಎಂದೂ ಹೇಳಿವೆ.

ನಿಗದಿತ ಸಮಯಕ್ಕೆ ಅನುಮೋದನೆ ಲಭಿಸಿದರೆ ಜುಲೈ 3ರಂದು ಲಸಿಕೆ ರವಾನೆಯಾಗುವ ಸಾಧ್ಯತೆ ಇದೆ ಎಂದು ಎಸ್‌ಐಐನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ADVERTISEMENT

2021 ಡಿಸೆಂಬರ್‌ 28ರಂದು ತುರ್ತು ಪರಿಸ್ಥಿತಿಗಳಲ್ಲಿ ವಯಸ್ಕರಿಗೆ ಕೊವೊವ್ಯಾಕ್ಸ್ ಲಸಿಕೆಯ ನಿರ್ಬಂಧಿತ ಬಳಕೆಗೆ ಭಾರತೀಯ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದ್ದರು.

ಜೂನ್‌ 29 ರಂದು ತುರ್ತು ಪರಿಸ್ಥಿತಿಗಳಲ್ಲಿ 7ರಿಂದ 11 ವರ್ಷದೊಳಗಿನವರಿಗೆ ಈ ಲಸಿಕೆಯ ನಿರ್ಬಂಧಿತ ಬಳಕೆಗೆ ಅನುಮೋದನೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.