ADVERTISEMENT

ಎಸ್‌ಐಆರ್ | ಬಿಎಲ್‌ಒಗಳಿಗೆ ಒತ್ತಡ ಹೇರುತ್ತಿಲ್ಲ: ಕೇರಳ ಮುಖ್ಯ ಚುನಾವಣಾ ಆಯುಕ್ತ

ಪಿಟಿಐ
Published 22 ನವೆಂಬರ್ 2025, 9:29 IST
Last Updated 22 ನವೆಂಬರ್ 2025, 9:29 IST
<div class="paragraphs"><p>ಎಸ್‌ಐಆರ್</p></div>

ಎಸ್‌ಐಆರ್

   

ತಿರುವನಂತಪುರ: ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಸಲು ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸಾಧ್ಯವಿರುವ ಎಲ್ಲಾ ಸಹಾಯ ಮಾಡುತ್ತಿದ್ದೇವೆ. ಅವರಿಗೆ ಒತ್ತಡ ಹಾಕುವ ಉದ್ದೇಶ ಇಲ್ಲ ಎಂದು ಕೇರಳ ಮುಖ್ಯ ಚುನಾವಣಾ ಆಯುಕ್ತ ರತನ್ ಯು. ಕೇಲ್ಕರ್ ಶನಿವಾರ ಹೇಳಿದ್ದಾರೆ.

‘ಒತ್ತಡ ಹೇರಬೇಕು ಎನ್ನುವ ಉದ್ದೇಶದೊಂದಿಗೆ ಬಿಎಲ್‌ಒಗಳಿಗೆ ಗುರಿ ನಿಗದಿ ಪಡಿಸಿಲ್ಲ, ಆದರೆ ಎಸ್‌ಐಆರ್‌ ಅನ್ನು ನಿಗದಿತ ಸಮಯದೊಳಗೆ ಮುಗಿಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ’ ಎಂದು ಅವರು ಮಾಧ್ಯಮದವರೊಂದಿಗೆ ಹೇಳಿದ್ದಾರೆ.

ADVERTISEMENT

ಬಿಎಲ್‌ಒಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಲ್ಲಿ ಕ್ರಮವಾಗಿ ಕನ್ನಡ ಹಾಗೂ ತಮಿಳು ಮಾತನಾಡುವ ಜನರಿದ್ದು, ಅಲ್ಲಿಯ ಜನ ಎಸ್‌ಐಆರ್ ನಮೂನೆಗಳನ್ನು ತುಂಬಿಸಲು ಸಹಾಯ ಮಾಡಲು ಬಿಎಲ್‌ಒಗಳ ಜೊತೆಗೆ ಈ ಭಾಷೆಯನ್ನು ತಿಳಿದಿರುವವನ್ನೂ ನೇಮಕ ಮಾಡಲಾಗಿದೆ. ಈವರೆಗೂ ಶೇ 70 ರಷ್ಟು ಮಂದಿ ನಮೂನೆಗಳನ್ನು ತುಂಬಿಸಿ ಹಿಂದಿರುಗಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.