ಕೋಲ್ಕತ್ತ: ಪಶ್ಚಿಮ ಬಂಗಾಳದ ಹಿಂಸಾಚಾರಪೀಡಿತ ಮುರ್ಶಿದಾಬಾದ್ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ಮನೆ ತೊರೆದು ಹೋಗಿದ್ದ ಕುಟುಂಬಗಳು ಹಿಂತಿರುಗುತ್ತಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಜಾವೆದ್ ಶಮಿಮ್ ಸೋಮವಾರ ತಿಳಿಸಿದ್ದಾರೆ.
ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿ ಹಿಂಸಾಚಾರಕ್ಕೆ ಶುಕ್ರವಾರದ ನಂತರ ಮುರ್ಶಿದಾಬಾದ್‌ನ ಸೂಟಿ, ಧುಲಿಯಾನ್, ಸಮ್ಸರ್‌ಗಂಜ್ ಮತ್ತು ಜಾಂಗಿಪುರ್‌ನಲ್ಲಿ ಮೂವರು ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದರು. ನೂರಾರು ಜನರು ಮನೆ ತೊರೆದಿದ್ದರು.
‘ಘಟನೆ ಸಂಬಂಧ 210 ಮಂದಿಯನ್ನು ಬಂಧಿಸಲಾಗಿದೆ. ಮಾಲ್ಡಾ ಮತ್ತು ಮುರ್ಶಿದಾಬಾದ್ ಜಿಲ್ಲಾಡಳಿತಗಳು ಇಲ್ಲಿನ ನಾಗರಿಕರ ಸುರಕ್ಷಿತ ವಾಪಸಾತಿಗೆ ಪ್ರಯತ್ನಿಸುತ್ತಿವೆ. 19 ಕುಟುಂಬಗಳು ವಾಪಸಾಗಿವೆ’ ಎಂದು ಎಡಿಜಿಪಿ ಶಮಿಮ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.