ADVERTISEMENT

ಸಿಪಿಐ(ಎಂ) ನಾಯಕನಿಗೆ ಹಲ್ಲೆ: 6 ಬಿಜೆಪಿಗರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 15:36 IST
Last Updated 16 ಡಿಸೆಂಬರ್ 2025, 15:36 IST
_
_   

ಆಲಪ್ಪುಳ (ಕೇರಳ) (ಪಿಟಿಐ): ಸ್ಥಳೀಯ ಸಿಪಿಎಂ ನಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದ ಅರೋಪದ ಮೇಲೆ ಬಿಜೆಪಿಯ ಆರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.

ಭಾನುವಾರ ರಾತ್ರಿ 9.15ಕ್ಕೆ ಸ್ಥಳೀಯ ಸಿಪಿಎಂ ನಾಯಕ ರಂಜಿತ್ ಮತ್ತು ಅವರ ಸ್ನೇಹಿತ ರೆನಿತ್ ನೀಲಂಪೆರೂರ್ ಪಂಚಾಯತ್‌ ಪ್ರದೇಶದ ಬಳಿ ತೆರಳಿದ್ದರು. ಇದನ್ನು ಆಕ್ಷೇಪಿಸಿ ಬಿಜೆಪಿ ಕಾರ್ಯಕರ್ತರು ಇಬ್ಬರನ್ನು ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತಿಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಲ್ಲಿ ಬಿಜೆಪಿ ಗೆದ್ದಿತ್ತು. ಗಾಯಗೊಂಡಿರುವ ರಂಜಿತ್ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.