ADVERTISEMENT

ಉತ್ತರ ಪ್ರದೇಶ: ಗಂಗಾನದಿಯಲ್ಲಿ ಮತ್ತೆ ತೇಲಿ ಬಂದ ಆರು ಶವಗಳು

ಪಿಟಿಐ
Published 31 ಮೇ 2021, 8:06 IST
Last Updated 31 ಮೇ 2021, 8:06 IST
ಉತ್ತರ ಪ್ರದೇಶದಲ್ಲಿ ಗಂಗಾ ನದಿಯ ಪಾತ್ರದಲ್ಲಿ ವಿವಿಧ ಶವಗಳನ್ನು ಹೂತಿರುವುದು (ಸಂಗ್ರಹ ಚಿತ್ರ)
ಉತ್ತರ ಪ್ರದೇಶದಲ್ಲಿ ಗಂಗಾ ನದಿಯ ಪಾತ್ರದಲ್ಲಿ ವಿವಿಧ ಶವಗಳನ್ನು ಹೂತಿರುವುದು (ಸಂಗ್ರಹ ಚಿತ್ರ)   

ಫತೇಪುರ: ‘ಉತ್ತರಪ್ರದೇಶದ ಗಂಗಾನದಿಯಲ್ಲಿ ಮತ್ತೆ ಆರು ಶವಗಳು ತೇಲಿಬಂದಿದ್ದು, ಇವುಗಳು ಕೋವಿಡ್‌ ಪೀಡಿತರ ಶವಗಳೆಂದು ಶಂಕಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.

‘ನದಿಯಲ್ಲಿ ಶವಗಳು ತೇಲುತ್ತಿವೆ ಎಂಬುದರ ಬಗ್ಗೆ ನನಗೆ ಭಾನುವಾರ ಬೆಳಿಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ನದಿಯಲ್ಲಿ ಆರು ಕೊಳೆತಿರುವ ಶವಗಳು ಸಿಕ್ಕಿವೆ’ ಎಂದು ಫತೇಪುರ ಸದರ್‌ನ ಉಪವಿಭಾಗಾಧಿಕಾರಿ ಪ್ರಮೋದ್‌ ಜಾ ಹೇಳಿದರು.

‘ಈ ಶವಗಳು ಕೊಳೆತಿರುವುದರಿಂದ ಅವುಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇವುಗಳು ಬಹಳ ದೂರದಿಂದ ತೇಲಿ ಬಂದಿರುವಂತೆ ಕಾಣುತ್ತಿದೆ’ ಎಂದು ತಿಳಿಸಿದರು.

ADVERTISEMENT

ಈ ತಿಂಗಳು ಬಲಿಯಾದ ನಾರಾಹಿ ಪ್ರದೇಶದ ಉಜಿಯಾರ್‌, ಕುಲ್ಹಡಿಯಾ, ಭರೌಲಿ ಘಾಟ್‌ಗಳಲ್ಲಿ 52 ಶವಗಳು ತೇಲಿ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.