ADVERTISEMENT

ಆಹಾರ ಕೊರತೆ: ರಾಮೇಶ್ವರದಲ್ಲಿ ಲಂಕಾದ ತಮಿಳರಿಗೆ ಪುನರ್ವಸತಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 15:11 IST
Last Updated 25 ಮಾರ್ಚ್ 2022, 15:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಆಹಾರ ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದಾಗಿ ಉತ್ತರ ಶ್ರೀಲಂಕಾದಲ್ಲಿ ತಮ್ಮ ಮನೆಗಳನ್ನು ತೊರೆದ ಒಂಬತ್ತು ಮಕ್ಕಳು ಸೇರಿದಂತೆ ಎಲ್ಲಾ 16 ತಮಿಳರನ್ನು ತಮಿಳುನಾಡು ಸರ್ಕಾರವು ರಾಮೇಶ್ವರ ಬಳಿಯ ಮಂಡಪಂನಲ್ಲಿರುವ ಪುನರ್ವಸತಿ ಶಿಬಿರದಲ್ಲಿ ಇರಿಸಿದೆ.

ಸೋಮವಾರ ಉತ್ತರದ ಮನ್ನಾರ್‌ನಿಂದ ಎರಡು ದೋಣಿಗಳಲ್ಲಿ ಹೊರಟಿದ್ದ ತಮಿಳರು, ಮಂಗಳವಾರ ರಾಮೇಶ್ವರ ತಲು‍ಪಿದ್ದರು. ಅಲ್ಲಿನ ಸ್ಥಳೀಯ ನ್ಯಾಯಾಲಯವು ಆರು ಜನರನ್ನು ವಶಕ್ಕೆ ಪಡೆಯಲು ಆದೇಶಿಸಿತ್ತು. ಆದರೆ, ತಮಿಳುನಾಡು ಸರ್ಕಾರವು ಎಲ್ಲರನ್ನೂ ಮಾನವೀಯ ಆಧಾರದ ಮೇಲೆ ಮಂಡಪಂನ ಶಿಬಿರದಲ್ಲಿ ಇರಿಸಿದೆ.

‘ನಾವು ಶ್ರೀಲಂಕಾದ 16 ತಮಿಳಿಗರನ್ನು ರಾಮೇಶ್ವರ ಸಮೀಪದ ಶಿಬಿರದಲ್ಲಿ ಇರಿಸಿದ್ದೇವೆ. ಅವರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡಲಾಗಿದೆ. ವೈದ್ಯಕೀಯ ನೆರವನ್ನೂ ನೀಡಲಾಗುತ್ತಿದೆ. ಅವರ ಪ್ರವೇಶದ ಬಗ್ಗೆ ಕೇಂದ್ರ ಸರ್ಕಾರವು ನಿರ್ಧಾರ ತೆಗೆದುಕೊಳ್ಳುವವರೆಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದು’ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಅನಿವಾಸಿ ತಮಿಳರ ಕಲ್ಯಾಣ ಮತ್ತು ನಿರಾಶ್ರಿತರ ಸಚಿವ ಕೆ.ಎಸ್. ಮಸ್ತಾನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.