ADVERTISEMENT

ಸ್ಮಾರ್ಟ್ ಸಿಟಿ: ಕಳಪೆ ನಗರಗಳ ಸುಧಾರಣೆಗೆ 20–20 ವಿಧಾನ

ಪಿಟಿಐ
Published 25 ಜನವರಿ 2020, 19:41 IST
Last Updated 25 ಜನವರಿ 2020, 19:41 IST
   

ವಿಶಾಖಪಟ್ಟಣ: ‘20 ಅತ್ಯುತ್ತಮ ಹಾಗೂ 20 ಕಳಪೆ ನಗರಗಳನ್ನು ಜತೆಗೂಡಿಸಲಾಗುವುದು.ಈ ಮೂಲಕ, ವಿವಿಧ ಯೋಜನೆಗಳನ್ನು ಜಾರಿಗೆ ತರಲು ಸಾಕಷ್ಟು ಸಂಪನ್ಮೂಲ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ರ್‍ಯಾಂಕಿಂಗ್ ಹೊಂದಿಲ್ಲದ ನಗರಗಳನ್ನು ಸುಧಾರಣೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ನಗರ ವ್ಯವಹಾರಗಳ ಸಚಿವಾಲಯ ಹೇಳಿದೆ.

‘ಅತ್ಯುತ್ತಮ ನಗರಗಳ ಮಾರ್ಗದರ್ಶನದೊಂದಿಗೆ ಹಿಂದುಳಿದ ನಗರಗಳಲ್ಲಿ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಅವರು ಈ 20–20 ವಿಧಾನ ರೂಪಿಸಿದ್ದಾರೆ’ ಎಂದು ಸ್ಮಾರ್ಟ್ ಸಿಟಿ ಯೋಜನೆ ನಿರ್ದೇಶಕ ಕುನಾಲ್ ಕುಮಾರ್ ತಿಳಿಸಿದ್ದಾರೆ.

‘ಮುಂದಿನ 15 ದಿನಗಳಲ್ಲಿ ಯಾವ್ಯಾವ ನಗರಗಳನ್ನು ಜೋಡಿಸಲಾಗುವುದು ಎಂದು ಘೋಷಿಸಲಾಗುತ್ತದೆ.ಯೋಜನೆ ಅನುಷ್ಠಾನ ಆಧಾರದಲ್ಲಿ, ಪ್ರತಿವಾರ ಆಂತರಿಕವಾಗಿ 100 ನಗರಗಳ ರ್‍ಯಾಂಕಿಂಗ್ ಸಿದ್ಧಪಡಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ದೇಶದ ಸುಮಾರು 100 ಸ್ಮಾರ್ಟ್‌ಸಿಟಿಗಳು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಿಂದುಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.