ರಜೌರಿ/ ಜಮ್ಮು: ‘ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಗಸ್ತು ತಿರುಗುತ್ತಿದ್ದ ಭಾರತೀಯ ಸೈನಿಕರ ಮೇಲೆ ಶನಿವಾರ ಗುಂಡಿನ ದಾಳಿ ನಡೆದಿದೆ. ಇದಕ್ಕೆ ಸೇನೆ ಕಡೆಯಿಂದ ತಕ್ಕ ಪ್ರತ್ಯುತ್ತರ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ದಾಳಿ ವೇಳೆ ಯಾವುದೇ ಸೈನಿಕರಿಗೂ ಗಾಯಗಳಾಗಿಲ್ಲ. ಆದರೂ, ಕಟ್ಟುನಿಟ್ಟಾದ ಗಸ್ತು ನಡೆಸುವಂತೆ ಸೈನಿಕರಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
‘ಎಲ್‌ಒಸಿಯ ‘ಕೇರಿ’ ಸೆಕ್ಟರ್‌ನಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯದ ಭಾಗದಲ್ಲಿ ಅವಿತಿದ್ದ ಭಯೋತ್ಪಾದಕರು ನಿರಂತರ ಗುಂಡಿನ ದಾಳಿ ನಡೆಸಿ, ಒಳನುಗ್ಗಲು ಯತ್ನಿಸಿದರು. ತಕ್ಷಣವೇ ಪ್ರತಿದಾಳಿ ನಡೆಸುವ ಮೂಲಕ ಅವರ ಯತ್ನವನ್ನು ವಿಫಲಗೊಳಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.