ADVERTISEMENT

ಲಂಡನ್‌ | ಖಾಲಿಸ್ತಾನ ಪರ ಪ್ರತಿಭಟನೆ: ಹೈಕಮಿಷನ್‌ ಕಚೇರಿ ಮೇಲಿನ ದಾಳಿಗೆ ಖಂಡನೆ

ಪಿಟಿಐ
Published 21 ಮಾರ್ಚ್ 2023, 13:24 IST
Last Updated 21 ಮಾರ್ಚ್ 2023, 13:24 IST
.
.   

ಲಂಡನ್‌: ಖಾಲಿಸ್ತಾನ ಪರ ಪ್ರತಿಭಟನೆ ಕೈಗೊಂಡಿದ್ದ ಪ್ರತ್ಯೇಕತಾವಾದಿಗಳು ಇಲ್ಲಿನ ಭಾರತೀಯ ಹೈಕಮಿಷನ್‌ ಎದುರಿನ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ, ಕಚೇರಿ ಮೇಲೆ ದಾಳಿ ನಡೆಸಿರುವ ಘಟನೆಯನ್ನು ಖಂಡಿಸಿ ಭಾರತೀಯರ ಸಂಘಟನೆಗಳು ಮಂಗಳವಾರ ಇಲ್ಲಿ ರ‍್ಯಾಲಿ ನಡೆಸಿವೆ.

‘ಪ್ರತ್ಯೇಕತಾವಾದಿಗಳು ಭಾರತದ ಧ್ವಜಕ್ಕೆ ಅವಮಾನ ಮಾಡಿರುವುದು ಆಘಾತ ತಂದಿದೆ’ ಎಂದು ಬ್ರಿಟನ್‌ನ ಫ್ರೆಂಡ್ಸ್‌ ಆಫ್‌ ಇಂಡಿಯಾ ಸೊಸೈಟಿ ಇಂಟರ್‌ನ್ಯಾಷನಲ್‌ (ಎಫ್‌ಐಎಸ್‌ಐ) ಸಂಘಟನೆಯು ಹೇಳಿದೆ. ಈ ಸಂಘಟನೆಯ ನೇತೃತ್ವದಲ್ಲಿ ಹೈಕಮಿಷನ್‌ ಕಚೇರಿ ಮುಂಭಾಗದಲ್ಲಿ ರ‍್ಯಾಲಿ ನಡೆದಿದೆ.

‘ಇಂತಹ ದಾಳಿ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸದಿರುವ ಬ್ರಿಟನ್‌ ಸರ್ಕಾರದ ವೈಫಲ್ಯವೂ ಆತಂಕ ತಂದಿದೆ’ ಎಂದೂ ಹೇಳಿದೆ.

ADVERTISEMENT

ಹೈಕಮಿಷನ್‌ ಕಚೇರಿ ಮೇಲಿನ ದಾಳಿಯನ್ನು ಖಂಡಿಸಿರುವ ನ್ಯಾಷನಲ್‌ ಇಂಡಿಯನ್‌ ಸ್ಟೂಡೆಂಟ್ಸ್‌ ಆ್ಯಂಡ್‌ ಅಲುಮ್ನಿ ಯೂನಿಯನ್‌ (ಎನ್‌ಐಎಸ್‌ಎಯು), ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

‘ಭಾರತೀಯ ಹೈಕಮಿಷನ್‌ ಕಚೇರಿ ಮೇಲೆ ನಡೆದ ದಾಳಿಯ ಕುರಿತು ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಇಂಡಿಯಾ ಹೌಸ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಬ್ರಿಟನ್‌ನಲ್ಲಿರುವ ಭಾರತದ ರಾಯಭಾರಿ ವಿಕ್ರಂ ದೊರೈಸ್ವಾಮಿ ಭಾಗವಹಿಸಿ, ಘಟನೆಗೆ ಕಳವಳ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.