ADVERTISEMENT

ಗಡಿ ಬಳಿ ರಕ್ಷಣಾ ಮೂಲಕ ಸೌಕರ್ಯ ಆತಂಕಕಾರಿ: ಚಾರ್ಲ್ಸ್ ಎ ಫ್ಲಿನ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 15:44 IST
Last Updated 8 ಜೂನ್ 2022, 15:44 IST

ನವದೆಹಲಿ: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಕಮ್ಯುನಿಸ್ಟ್ ಪಾರ್ಟಿಯ (ಸಿಸಿಪಿ) ವಿನಾಶಕಾರಿ ನಡವಳಿಕೆ ಹಾಗೂ ಭಾರತದೊಂದಿಗಿನ ತನ್ನ ಗಡಿಯಲ್ಲಿ ನಡೆಸುತ್ತಿರುವ ಕೆಲವು ರಕ್ಷಣಾ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಂದ ಆತಂಕ ಎದುರಾಗಿದೆ ಎಂದು ಅಮೆರಿಕ ಸೇನೆಯ ಪೆಸಿಫಿಕ್ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ ಫ್ಲಿನ್ ತಿಳಿಸಿದ್ದಾರೆ.

ಲಡಾಖ್‌ನಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಕುರಿತು ಇಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಚೀನಾದ ಮಿಲಿಟರಿ ಶಸ್ತ್ರಾಗಾರ ನೋಡಿದಾಗ, ಅದು ಏಕೆ ಬೇಕು ಎಂಬ ಪ್ರಶ್ನೆ ಕೇಳಬೇಕಿದೆ. ಚೀನಾ ಮತ್ತು ಭಾರತ ನಡುವೆ ನಡೆಯುತ್ತಿರುವ ಮಾತುಕತೆ ಸಹಕಾರಿಯಾಗಲಿದೆ’ ಎಂದರು.

2014 ರಿಂದ 2022ರ ಅವಧಿ ನಡುವೆ ಚೀನಾದ ವರ್ತನೆಯಲ್ಲಾದ ಬದಲಾವಣೆ ಬಗ್ಗೆಯೂ ಫ್ಲಿನ್ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.