ADVERTISEMENT

ತೆಲಂಗಾಣ ಘಟಕದ ರಾಜಕೀಯ ವ್ಯವಹಾರಗಳ ಸಮಿತಿ ರಚಿಸಿದ ಸೋನಿಯಾ ಗಾಂಧಿ

ಪಿಟಿಐ
Published 12 ಸೆಪ್ಟೆಂಬರ್ 2021, 11:23 IST
Last Updated 12 ಸೆಪ್ಟೆಂಬರ್ 2021, 11:23 IST
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ   

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾನುವಾರ ಪಕ್ಷದ ತೆಲಂಗಾಣ ಘಟಕದ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಿದ್ದು, ರಾಜ್ಯದ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಮಾಣಿಕ್ಕಂ ಟ್ಯಾಗೋರ್ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಮೊಹ್ಮದ್ ಸಬ್ಬೀರ್ ಅಲಿ ಸಮಿತಿಯ ಸಂಚಾಲಕರಾಗಿದ್ದು, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಎ.ರೇವಂತ್ ರೆಡ್ಡಿ, ಹಿರಿಯ ನಾಯಕರಾದ ಮಲ್ಲು ಭಟ್ಟಿ ವಿಕ್ರಮಾರ್ಕ, ವಿ.ಹನುಮಂತ ರಾವ್, ಪೊನ್ನಾಲ ಲಕ್ಷ್ಮಯ್ಯ, ಕೆ.ಜನ ರೆಡ್ಡಿ ಮತ್ತು ಎನ್.ಉತ್ತಮ ಕುಮಾರ್ ರೆಡ್ಡಿ ಸಮಿತಿಯಲ್ಲಿದ್ದಾರೆ.

ಟಿ.ಜೀವನ್ ರೆಡ್ಡಿ, ರೇಣುಕಾ ಚೌಧರಿ, ಪಿ.ಬಲರಾಮ್ ನಾಯಕ್, ಕೋಮತಿರೆಡ್ಡಿ ವೆಂಕಟ್ ರೆಡ್ಡಿ, ಡಿ.ಶ್ರೀಧರ್ ಬಾಬು, ಪೊಡ್ಡೆಂ ವೀರಯ್ಯ, ಅನಸೂಯಾ (ಸೀತಕ್ಕ) ಮತ್ತು ಕೋಮತಿರೆಡ್ಡಿ ರಾಜಗೋಪಾಲ್ ರೆಡ್ಡಿ ಸಹ ಸಮಿತಿಯ ಸದಸ್ಯರಾಗಿದ್ದಾರೆ.

ADVERTISEMENT

ಅದಲ್ಲದೆ, ಎಲ್ಲಾ ರಾಜ್ಯ ಘಟಕದ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಅನುಮೋದನೆ ಪಡೆದ ಎಲ್ಲಾ ಸಮಿತಿಗಳ ಅಧ್ಯಕ್ಷರು, ತೆಲಂಗಾಣದ ಎಲ್ಲಾ ಎಐಸಿಸಿ ಕಾರ್ಯದರ್ಶಿಗಳು ಮತ್ತು ತೆಲಂಗಾಣದ ಎಲ್ಲಾ ಎಐಸಿಸಿ ಉಸ್ತುವಾರಿಗಳು ಕೂಡ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.