ADVERTISEMENT

‘ದೇಶ್ ಕಾ ಮೆಂಟರ್ಸ್’ನ ಬ್ರ್ಯಾಂಡ್‌ ರಾಯಭಾರಿಯಾಗಿ ಸೋನು ಸೋದ್‌: ಕೇಜ್ರಿವಾಲ್‌

ಪಿಟಿಐ
Published 27 ಆಗಸ್ಟ್ 2021, 7:43 IST
Last Updated 27 ಆಗಸ್ಟ್ 2021, 7:43 IST
ನಟ ಸೋನು ಸೂದ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು             –ಪಿಟಿಐ ಚಿತ್ರ
ನಟ ಸೋನು ಸೂದ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು             –ಪಿಟಿಐ ಚಿತ್ರ   

ನವದೆಹಲಿ: ‘ದೆಹಲಿಯ ಎಎಪಿ ಸರ್ಕಾರದ ‘ದೇಶ್ ಕಾ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್‌ ರಾಯಭಾರಿಯನ್ನಾಗಿ ನಟ ಸೋನು ಸೋದ್‌ ಅವರನ್ನು ನೇಮಿಸಲಾಗಿದೆ’ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನವನ್ನು ಆರಿಸುವಲ್ಲಿ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

‘ಸರ್ಕಾರಿ ಶಾಲೆಯ ಬಹುತೇಕ ವಿದ್ಯಾರ್ಥಿಗಳು ತೀರಾ ಬಡ ಕುಟುಂಬಗಳಿಂದ ಬಂದವರಾಗಿರುತ್ತಾರೆ. ಅವರಿಗೆ ಮಾರ್ಗದರ್ಶನ ನೀಡಲು ಕೆಲವೇ ಜನರಿರುತ್ತಾರೆ. ಹಾಗಾಗಿ ಈ ಮಕ್ಕಳಿಗೆ ಮಾರ್ಗದರ್ಶಕರಾಗುವಂತೆ ನಾವು ವಿದ್ಯಾವಂತರಲ್ಲಿ ಮನವಿ ಮಾಡುತ್ತೇವೆ. ಈ ಕಾರ್ಯಕ್ರಮದ ಬ್ರ್ಯಾಂಡ್‌ ರಾಯಭಾರಿಯನ್ನಾಗಿ ಸೋನು ಸೂದ್ ಕಾರ್ಯ ನಿರ್ವಹಿಸುವರು’ ಎಂದು ಅವರು ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸೋನು ಸೂದ್‌ ಹಾಗೂ ಕೇಜ್ರಿವಾಲ್‌ ಅವರು, ‘ನಾವು ಕೇವಲ ಕಾರ್ಯಕ್ರಮದ ಕುರಿತಾಗಿ ಮಾತುಕತೆ ನಡೆಸಿದೆವು. ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ಚರ್ಚಿಸಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.