ADVERTISEMENT

ಗುಜರಾತ್‌ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ದಕ್ಷಿಣ ಕೊರಿಯಾದ ವ್ಯಕ್ತಿ ಸಾವು

ಪಿಟಿಐ
Published 25 ಡಿಸೆಂಬರ್ 2022, 10:12 IST
Last Updated 25 ಡಿಸೆಂಬರ್ 2022, 10:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಹಸಾನಾ (ಗುಜರಾತ್): ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ನೆಲಕ್ಕೆ ಅಪ್ಪಳಿಸಿ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬ ಗುಜರಾತ್‌ನಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ವಡೋದರಾ ನಗರಕ್ಕೆ ಪ್ರವಾಸಕ್ಕೆ ಬಂದಿದ್ದ ಶಿನ್ ಬಿಯೊಂಗ್ ಮೂನ್ ಎನ್ನುವ ದಕ್ಷಿಣ ಕೊರಿಯಾದ 30 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ

ಗುಜರಾತ್‌ನ ಮೆಹಸಾನಾ ಜಿಲ್ಲೆಯ ಕಾಡಿ ಪಟ್ಟಣದ ಬಳಿಯ ವಿಸ್ತಾಪುರ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ADVERTISEMENT

ಶಿನ್ ಹಾಗೂ ಆತನ ಸ್ನೇಹಿತಪ್ಯಾರಾಗ್ಲೈಡಿಂಗ್ ಮಾಡಲು ಬಂದಿದ್ದರು. ಈ ವೇಳೆ ನೆಲಕ್ಕೆ 50 ಅಡಿ ದೂರ ಇರುವಾಗಪ್ಯಾರಾಗ್ಲೈಡಿಂಗ್ ಸರಿಯಾಗಿ ತೆರೆದುಕೊಳ್ಳದೇ ಶಿನ್ಬಿದ್ದು ಮೃತಪಟ್ಟಿದ್ದಾರೆ ಎಂದುಮೆಹಸಾನಾ ಇನ್‌ಸ್ಪೆಕ್ಟರ್ ನಿಕುಂಜ್ ಪಟೇಲ್ ತಿಳಿಸಿದ್ದಾರೆ.

ಪ್ರಕರಣವನ್ನು ಭಾರತದಲ್ಲಿರುವ ದಕ್ಷಿಣ ಕೊರಿಯಾದ ರಾಯಭಾರ ಕಚೇರಿಯ ಗಮನಕ್ಕೆ ತರಲಾಗಿದ್ದು, ಮೃತದೇಹವನ್ನು ಸ್ವದೇಶಕ್ಕೆ ಕಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.