ADVERTISEMENT

ವೈಷ್ಣೋದೇವಿ, ಕಾಶ್ಮೀರ ಕಣಿವೆಗೆ ಬೇಸಿಗೆಯಲ್ಲಿ ವಿಶೇಷ ಪ್ರವಾಸಿ ರೈಲು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 12:25 IST
Last Updated 18 ಫೆಬ್ರುವರಿ 2026, 12:25 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಭಾರತೀಯ ರೈಲ್ವೆ ಮತ್ತು ‘ಸೌತ್‌ ಸ್ಟಾರ್‌ ರೈಲು’ ಜಂಟಿಯಾಗಿ ಕಾಶ್ಮೀರ ಕಣಿವೆ ಮತ್ತು ವೈಷ್ಣೋದೇವಿ ದೇವಸ್ಥಾನಕ್ಕೆ ಈ ಬಾರಿಯ ಬೇಸಿಗೆಯಲ್ಲಿ ವಿಶೇಷ ಪ್ರವಾಸಿ ರೈಲು ಸೇವೆ ಒದಗಿಸಲಿವೆ.

ADVERTISEMENT

ಸೌತ್‌ ಸ್ಟಾರ್‌ ರೈಲು ಖಾಸಗಿ ವಲಯದ ರೈಲು ಸೇವಾ ಕಂಪನಿಯಾಗಿದೆ. 13 ದಿನಗಳ ಕಾಶ್ಮೀರ ಕಣಿವೆ, ವೈಷ್ಣೋದೇವಿ ದೇವಸ್ಥಾನ ಪ್ರವಾಸವು ಏಪ್ರಿಲ್‌ 11ರಿಂದ ಶುರುವಾಗಲಿದೆ. ಇದಕ್ಕೆ ಟಿಕೆಟ್‌ ಕಾಯ್ದಿರಿಸುವಿಕೆ ಆರಂಭವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆದರೆ ಈ ವಿಶೇಷ ಪ್ರವಾಸಿ ರೈಲಿನ ಟಿಕೆಟ್‌ ಕಾಯ್ದಿರಿಸುವಿಕೆ ಐಆರ್‌ಸಿಟಿಸಿ ವೆಬ್‌ಸೈಟ್‌ ಮೂಲಕ ಆಗದು. ಟಿಕೆಟ್‌ ಕಾಯ್ದಿರಿಸಲು 93550 21516 ದೂರವಾಣಿ ಸಂಖ್ಯೆಯನ್ನು ನೇರವಾಗಿ ಸಂಪರ್ಕಿಸಬೇಕು ಅಥವಾ www.tourtimes.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಪ್ರವಾಸಿಗರು ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಈ ರೈಲು ಪ್ರಯಾಣ ಆರಂಭಿಸಬಹುದು. ಇದಕ್ಕೆ ಬಂಗಾರಪೇಟೆ, ಬೆಂಗಳೂರಿನ ವೈಟ್‌ಫೀಲ್ಡ್‌, ಯಲಹಂಕದಲ್ಲಿಯೂ ನಿಲುಗಡೆ ವ್ಯವಸ್ಥೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.