ADVERTISEMENT

ಅಹಮದಾಬಾದ್‌ನಲ್ಲಿ ಸ್ಪೈಸ್‌ಜೆಟ್‌ ತುರ್ತು ಭೂಸ್ಪರ್ಶ

ಪಿಟಿಐ
Published 4 ಜುಲೈ 2018, 12:50 IST
Last Updated 4 ಜುಲೈ 2018, 12:50 IST
ಸ್ಪೈಸ್‌ಜೆಟ್‌ ವಿಮಾನ– ಸಾಂದರ್ಭಿಕ ಚಿತ್ರ
ಸ್ಪೈಸ್‌ಜೆಟ್‌ ವಿಮಾನ– ಸಾಂದರ್ಭಿಕ ಚಿತ್ರ   

ಅಹಮದಾಬಾದ್‌: ಮುಂಬೈನಿಂದ ದೆಹಲಿಗೆ ಸಂಚರಿಸುತ್ತಿದ್ದ ಸ್ಪೈಸ್‌ಜೆಟ್‌ ವಿಮಾನದಲ್ಲಿ ತುರ್ತು ಪರಿಸ್ಥಿತಿ ಎದುರಾಗಿ ಬುಧವಾರ ಬೆಳಿಗ್ಗೆ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಸುಮಾರು 100 ಪ್ರಯಾಣಿಕರಿದ್ದ ಬೋಯಿಂಗ್‌ 737 ವಿಮಾನದ ಕ್ಯಾಬಿನ್‌ನಲ್ಲಿ ಒತ್ತಡದ ಕೊರತೆ ಉಂಟಾಗಿದ್ದು, ಮಾರ್ಗಮಧ್ಯೆಯೇ ಪಥ ಬದಲಿಸಿ ಅಹಮದಾಬಾದ್‌ ತಲುಪಿದೆ ಎಂದು ಸ್ಪೈಸ್‌ಜೆಟ್‌ ಏರ್‌ಲೈನ್‌ ವಕ್ತಾರ ತಿಳಿಸಿದ್ದಾರೆ.

ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.