ADVERTISEMENT

ದೆಹಲಿ, ಮುಂಬೈನಿಂದ ಲಂಡನ್‌ಗೆ ಸ್ಪೈಸ್‌ಜೆಟ್‌ನಿಂದ ವಿಮಾನಸೇವೆ

ಪಿಟಿಐ
Published 5 ಅಕ್ಟೋಬರ್ 2020, 13:14 IST
Last Updated 5 ಅಕ್ಟೋಬರ್ 2020, 13:14 IST
ಸ್ಪೈಸ್‌ಜೆಟ್ ವಿಮಾನ
ಸ್ಪೈಸ್‌ಜೆಟ್ ವಿಮಾನ   

ನವದೆಹಲಿ: ಸ್ಪೈಸ್ ಜೆಟ್ ಸಂಸ್ಥೆಯು ದೆಹಲಿ ಮತ್ತು ಮುಂಬೈನಿಂದ ಲಂಡನ್‌ಗೆ ಡಿಸೆಂಬರ್ 4ರಿಂದ ಆರಂಭವಾಗುವಂತೆ ನೇರ ವಿಮಾನ ಸೇವೆ ಆರಂಭಿಸಲಿದೆ. ಲಂಡನ್‌ಗೆ ಸಂಪರ್ಕ ಕಲ್ಪಿಸುತ್ತಿರುವ ಕಡಿಮೆ ಪ್ರಯಾಣ ದರದ ಭಾರತೀಯ ವೈಮಾನಿಕ ಸೇವಾ ಸಂಸ್ಥೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಯುನೈಟೆಡ್‌ ಕಿಂಗ್‌ಡಂ ಜೊತೆಗಿನ ಒಪ್ಪಂದದ ಅನುಸಾರ, ದೆಹಲಿ–ಲಂಡನ್ ಮತ್ತು ಮುಂಬೈ–ಲಂಡನ್ ನಡುವಣ ವೈಮಾನಿಕ ಸೇವೆ ಆರಂಭವಾಗಲಿದೆ. ಈ ಮಾರ್ಗಗಳಲ್ಲಿ ಸೇವೆ ಒದಗಿಸಲು ಸ್ಪೈಸ್‌ಜೆಟ್ ಏರ್‌ಬಸ್ ಎ330–900 ನಿಯೊ ವಿಮಾನವನ್ನು ಬಳಸಲಿದೆ ಎಂದು ತಿಳಿಸಿದೆ.

‘ಈ ವಿಮಾನದ ಒಟ್ಟು ಆಸನ ಸಾಮರ್ಥ್ಯ 371 ಸೀಟುಗಳಾಗಿದ್ದು, ಎಕಾನಮಿ ದರ್ಜೆಯ 353 ಹಾಗೂ ಬ್ಯುಸಿನೆಸ್ ದರ್ಜೆಯ 18 ಸೀಟುಗಳನ್ನು ಒಳಗೊಂಡಿದೆ. ಲಂಡನ್‌ನ ಹೀ ಥ್ರೂ ನಿಲ್ದಾಣದಿಂದ ಈ ವಿಮಾನಗಳು ಕಾರ್ಯಾರಂಭ ಮಾಡಲಿವೆ’ ಎಂದು ಸ್ಪೈಸ್‌ಜೆಟ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.