ADVERTISEMENT

ಅಯೋಧ್ಯೆ | ಜುಲೈ 18ಕ್ಕೆ ರಾಮ ಮಂದಿರ ಟ್ರಸ್ಟ್‌ ಸದಸ್ಯರ ಸಭೆ

ಏಜೆನ್ಸೀಸ್
Published 4 ಜುಲೈ 2020, 10:05 IST
Last Updated 4 ಜುಲೈ 2020, 10:05 IST
   

ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಸಂಬಂಧ ಚರ್ಚಿಸಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ಜುಲೈ 18 ರಂದು ಸಭೆ ಸೇರಲಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಕಮಲ್‌ ನಯನ್‌ ದಾಸ್‌ ಶುಕ್ರವಾರ ಹೇಳಿದ್ದಾರೆ.

‘ಟ್ರಸ್ಟ್‌ ಸದಸ್ಯರು ಜುಲೈ 18 ರಂದು ಅಯೋಧ್ಯೆಯಲ್ಲಿ ಸಭೆ ಸೇರಲಿದ್ದಾರೆ. ಮಂದಿರ ನಿರ್ಮಾಣದ ಬಗ್ಗೆ ಚರ್ಚಿಸುವುದು ಸಭೆಯ ಉದ್ದೇಶವಾಗಿದ್ದು, ನಿರ್ಮಾಣ ಕಾರ್ಯ ಆರಂಭವಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರೂ ಒಮ್ಮೆ ಭೇಟಿ ಮಾಡಬೇಕೆಂಬುದು ನಮ್ಮ ಬಯಕೆಯಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ಮೊದಲು ಟ್ರಸ್ಟ್‌ ಸದಸ್ಯಗೋಪಾಲ್ ದಾಸ್ ಅವರು, ಅಯೋಧ್ಯೆಯಲ್ಲಿ ದೇವಾಲಯದ ಸ್ಥಳದಲ್ಲಿ ನಿರ್ಮಾಣ ಕಾರ್ಯಗಳನ್ನು ಉದ್ಘಾಟಿಸುವಂತೆ ಪ್ರಧಾನಿಯವರನ್ನು ಕೋರಿದ್ದೇವೆ ಎಂದು ಹೇಳಿದ್ದರು.

‘ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯಗಳನ್ನು ಉದ್ಘಾಟಿಸುವಂತೆ ಕೋರಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇವೆ. ಪೂಜಾ ಕಾರ್ಯಗಳು ಮೂರು ತಿಂಗಳಿನಿಂದ ನಡೆಯುತ್ತಿವೆ’ ಎಂದು ತಿಳಿಸಿದ್ದರು.

ADVERTISEMENT

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ್ದ ಸುಪ್ರೀಂ, ಮೂರು ತಿಂಗಳೊಳಗೆ ಟ್ರಸ್ಟ್‌ ರಚಿಸಿ ಮಂದಿರದ ನಿವೇಶನವನ್ನು ಅದಕ್ಕೆ ಒಪ್ಪಿಸಬೇಕು ಎಂದುನವೆಂಬರ್‌ 9 ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.