ADVERTISEMENT

ಪುರಿ ಜಗನ್ನಾಥ ದೇವಾಲಯದ ಸಮೀಪ ಪುರಾತನ ಮಠಗಳ ನೆಲಸಮ; ಟ್ವೀಟಿಗರ ಆಕ್ರೋಶ 

ಸಾಮಾಜಿಕ_ಮಾಧ್ಯಮದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 8:36 IST
Last Updated 13 ಸೆಪ್ಟೆಂಬರ್ 2019, 8:36 IST
ಪುರಿ ಜಗನ್ನಾಥ ದೇವಾಲಯದ ಸಮೀಪ ಮಠಗಳನ್ನು ನೆಲಸಮಗೊಳಿಸುತ್ತಿರುವುದು– ಚಿತ್ರಕೃಪೆ: Twitter
ಪುರಿ ಜಗನ್ನಾಥ ದೇವಾಲಯದ ಸಮೀಪ ಮಠಗಳನ್ನು ನೆಲಸಮಗೊಳಿಸುತ್ತಿರುವುದು– ಚಿತ್ರಕೃಪೆ: Twitter   

ಭುವನೇಶ್ವರ: ಒಡಿಶಾದ ಹನ್ನೆರಡನೇ ಶತಮಾನದ ಪುರಿ ಜಗನ್ನಾಥ ದೇವಾಲಯದ 75 ಮೀಟರ್‌ ಪರಿಧಿಯಲ್ಲಿ ಪುರಾತನ ಕಟ್ಟಡಗಳನ್ನು ಉರುಳಿಸುತ್ತಿರುವ ಜಿಲ್ಲಾಡಳಿತದ ಕ್ರಮಕ್ಕೆ ಟ್ವಿಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

’ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ದೇವಾಲಯಗಳು ಹಾಗೂ ಮಠಗಳನ್ನು ನೆಲಸಮಗೊಳಿಸುತ್ತಿರುವುದನ್ನು ನಿಲ್ಲಿಸಿ‘ ಎಂದು ಒಡಿಶಾ ಸರ್ಕಾರವನ್ನು ಹಲವು ಟ್ವೀಟಿಗರು ಒತ್ತಾಯಿಸಿದ್ದಾರೆ.#StopDemolitionOfPuriMutts ಹ್ಯಾಷ್‌ಟ್ಯಾಗ್‌ ಶುಕ್ರವಾರ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿತ್ತು.

ದೇವಾಲಯದ ಸಮೀಪದ ಮಠಗಳ ನೆಲಸಮ ಮಾಡುವುದನ್ನು ವಿರೋಧಿಸಿ ಸಂತರು ಹಾಗೂ ಭಕ್ತಾದಿಗಳು ಸೆಪ್ಟೆಂಬರ್‌ 3ರಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದು ಜಿಲ್ಲಾಡಳಿತ ಪುರಾತ ಕಟ್ಟಡಗಳನ್ನು ಉರುಳಿಸುವ ಕಾರ್ಯ ಸ್ಥಗಿತಗೊಳಿಸಿತ್ತು. ಕಾರ್ಯಾಚರಣೆಯಿಂದ ಜನರಿಗೆ ಸಮಸ್ಯೆ ಉಂಟಾಗದಂತೆ ಗಮನಿಸಲು ಸುಪ್ರೀಂ ಕೋರ್ಟ್‌ ರಂಜಿತ್‌ ಕುಮಾರ್ ಅವರನ್ನು ಅಮಿಕಸ್‌ ಕ್ಯೂರಿ ಆಗಿ ಸೆಪ್ಟೆಂಬರ್‌ 7ರಂದು ನೇಮಿಸಿತು.

ADVERTISEMENT

ಈಗಾಗಲೇ ದೇವಾಲಯದ ಸಮೀಪದ ಮೂರು ಪುರಾತನ ಮಠಗಳನ್ನು ಉರುಳಿಸಲಾಗಿದೆ.

ಮುಂದಿನ ಯೋಜನೆಗಳ ಬಗ್ಗೆ ಕೆಲವರು ಟ್ವೀಟಿಸಿದರೆ, ಇದೊಂದು ರಾಜಕೀಯ ಪ್ರೇರಿತ ಎಂದೂ ಪ್ರಕಟಿಸಿಕೊಂಡಿದ್ದಾರೆ. 800–900 ವರ್ಷಗಳ ಪುರಾತನ ಮಠಗಳನ್ನು ಕೆಡವಲಾಗುತ್ತಿದೆ, ಇದರಿಂದ ನಮ್ಮ ಪರಂಪರೆ ಕಳೆದು ಹೋದಂತಾಗಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವೀಟಿಗರ ಚರ್ಚೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.