ADVERTISEMENT

ತಿರಂಗಾ ಯಾತ್ರೆ: ಗುಜರಾತ್‌ ಮಾಜಿ ಉಪ ಮುಖ್ಯಮಂತ್ರಿ ಪಟೇಲ್‌ಗೆ ಹಸು ಡಿಕ್ಕಿ, ಗಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2022, 11:23 IST
Last Updated 13 ಆಗಸ್ಟ್ 2022, 11:23 IST
ಟ್ವಿಟರ್ ಸ್ಕ್ರೀನ್‌ಶಾಟ್
ಟ್ವಿಟರ್ ಸ್ಕ್ರೀನ್‌ಶಾಟ್   

ನವದೆಹಲಿ: ಗುಜರಾತ್‌ನ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ತಿರಂಗಾ ಯಾತ್ರೆ ನಡೆಸುತ್ತಿದ್ದಾಗ ಓಡೋಡಿ ಬಂದ ಹಸು ಡಿಕ್ಕಿ ಹೊಡೆದ ಪರಿಣಾಮ ಎಡಗಾಲಿಗೆ ಗಾಯವಾಗಿರುವಘಟನೆ ವರದಿಯಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಂತೆ ನಿತಿನ್ ಪಟೇಲ್ ನೇತೃತ್ವದಲ್ಲಿಮೆಹಸಾನಾದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ:

ಈ ವೇಳೆ ಘಟನೆ ನಡೆದಿದೆ. ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ವಿಭಾಗದ ಉಸ್ತುವಾರಿ ಸರಳ್ ಪಟೇಲ್ ಈ ಸಂಬಂಧ ವಿಡಿಯೊ ಹಂಚಿದ್ದಾರೆ.

ADVERTISEMENT

ತ್ರಿವರ್ಣ ಧ್ವಜ ಹಿಡಿದ ಗುಂಪಿಗೆ ಏಕಾಏಕಿ ನುಗ್ಗಿದ ಹಸು, ಪಟೇಲ್ ಅವರಿಗೆ ಢಿಕ್ಕಿ ಹೊಡೆದಿದೆ.

ಗುಜರಾತ್‌ನ ಆಮ್ ಆದ್ಮಿ ಪಕ್ಷದ ನಾಯಕ ಮಾಡಿರುವ ಮಗದೊಂದು ಟ್ವೀಟ್‌ನಲ್ಲಿ, ಗಾಯಗೊಂಡಿರುವ ಪಟೇಲ್, ವೀಲ್ ಚೇರ್‌ನಲ್ಲಿ ಸಾಗುತ್ತಿರುವ ಚಿತ್ರ ಹಂಚಿಕೊಂಡಿದ್ದು, ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.