ರ‍್ಯಾಗಿಂಗ್
ತಿರುವನಂತಪುರ: ಕೇರಳದ ವಯನಾಡ್‌ನ ಕಲ್ಪೆಟ್ಟ ಸಮೀಪದ ಪ್ರೌಢ ಶಾಲೆಯಲ್ಲಿ ರ‍್ಯಾಗಿಂಗ್‌ನಿಂದಾಗಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ.
ಷಯಾಜ್ (16) ಗಾಯಗೊಂಡ ವಿದ್ಯಾರ್ಥಿ.
ವಿದ್ಯಾರ್ಥಿ ಹೇಳಿಕೆಯ ಆಧಾರದಲ್ಲಿ ಕಂಬಲಕ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಹಿರಿಯ ಸಹಪಾಠಿಗಳ ಗುಂಪು, ಮೀಸೆ ಏಕೆ ತೆಗೆದಿಲ್ಲ ಎಂದು ನಿಂದಿಸಿತು. ನಂತರ ಹಿರಿಯ ವಿದ್ಯಾರ್ಥಿಯೊಬ್ಬ ಗಡ್ಡ ಮತ್ತು ಮೀಸೆಯನ್ನು ತೆಗೆಯುವಂತೆ ಸೂಚಿಸಿದ. ಆದರೆ ಗಡ್ಡವನ್ನು ಮಾತ್ರ ತೆಗೆದ ಕಾರಣಕ್ಕಾಗಿ ಗುಂಪು ಮನಬಂದಂತೆ ಥಳಿಸಿತು’ ಎಂದು ಷಯಾಜ್ ತಿಳಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.