ADVERTISEMENT

ಮೋದಿ ಸರ್ಕಾರದ ವಿರುದ್ಧದ ಟೀಕೆಗೆ ಚರ್ಚಿಲ್‌ ಉದಾಹರಣೆ ಕೊಟ್ಟು ಉತ್ತರಿಸಿದ ಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2022, 8:01 IST
Last Updated 13 ಏಪ್ರಿಲ್ 2022, 8:01 IST
ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ (ಪಿಟಿಐ ಚಿತ್ರ)
ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ (ಪಿಟಿಐ ಚಿತ್ರ)   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ, ವಿದೇಶಾಂಗ ನೀತಿಗಳ ಬಗ್ಗೆ ನಿರಂತರವಾಗಿ ಟೀಕೆ ಮಾಡುತ್ತಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು ವಿನ್‌ಸ್ಟನ್‌ ಚರ್ಚಿಲ್‌ ಅವರ ಉದಾಹರಣೆಯನ್ನು ಕೊಟ್ಟಿದ್ದಾರೆ.

ಸುಬ್ರಮಣಿಯನ್‌ ಸ್ವಾಮಿ ಅವರು ಆಡಳಿತ ಪಕ್ಷದ ನಾಯಕರಾಗಿದ್ದುಕೊಂಡು ಅವರದೇ ಸರ್ಕಾರದ ವಿರುದ್ಧ ಟೀಕೆ ಮಾಡುವ ಬಗ್ಗೆ ಹಲವರು ಆಗಾಗ ಪ್ರಶ್ನಿಸುವುದಿದೆ.

'1930ರಲ್ಲಿ ಚರ್ಚಿಲ್‌ ಹೇಳಿದಂತೆ, ಪ್ರತಿಪಕ್ಷಗಳ ನಾಲಿಗೆ ಕಟ್ಟಿಕೊಂಡಾಗ, ತನ್ನಂತಹ ಗುರುತಿಸಲ್ಪಟ್ಟ ಆಡಳಿತ ಪಕ್ಷದ ನಾಯಕರು ಸರ್ಕಾರದ ತಪ್ಪು ನೀತಿಗಳನ್ನು ಟೀಕಿಸಬೇಕಾಗುತ್ತದೆ' ಎಂದು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮೂಲಕ ಉತ್ತರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.