ADVERTISEMENT

ಗಗನಯಾನಿ ಸುನಿತಾ ಮಿಲಿಯಮ್ಸ್‌ಗೆ 'ಭಾರತ ರತ್ನ' ನೀಡುವಂತೆ ಮಮತಾ ಬ್ಯಾನರ್ಜಿ ಒತ್ತಾಯ

ಪಿಟಿಐ
Published 19 ಮಾರ್ಚ್ 2025, 11:31 IST
Last Updated 19 ಮಾರ್ಚ್ 2025, 11:31 IST
<div class="paragraphs"><p>ಮಮತಾ ಬ್ಯಾನರ್ಜಿ-&nbsp;ಸುನಿತಾ ಮಿಲಿಯಮ್ಸ್‌</p></div>

ಮಮತಾ ಬ್ಯಾನರ್ಜಿ- ಸುನಿತಾ ಮಿಲಿಯಮ್ಸ್‌

   

ಕೋಲ್ಕತ್ತ: ಗಗನಯಾನಿ ಸುನಿತಾ ಮಿಲಿಯಮ್ಸ್‌ಗೆ ಭಾರತ ರತ್ನ ನೀಡಿ, ಗೌರವಿಸಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಗಗನಯಾನಿಗಳನ್ನು ಭೂಮಿಗೆ ಕರೆ ತರುವಲ್ಲಿ ನಿರಂತರವಾಗಿ ಶ್ರಮಿಸಿದ ರಕ್ಷಣಾ ತಂಡಗಳನ್ನು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

ADVERTISEMENT

'ಹಲವಾರು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ವಿಲಿಯಮ್ಸ್ ಮತ್ತು ಬುಚ್ ಗಗನಯಾನಿಗಳನ್ನು ರಕ್ಷಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ವಿಧಾನಸಭೆಯ ಪರವಾಗಿ ಧನ್ಯವಾದ ತಿಳಿಸುತ್ತೇನೆ. ಸುನಿತಾ ವಿಲಿಯಮ್ಸ್ ಅವರನ್ನು ಅಭಿನಂದಿಸುತ್ತೇನೆ. ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು' ಎಂದು ಬ್ಯಾನರ್ಜಿ ಒತ್ತಾಯಿಸಿದರು.

'ನನಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಇದೆ. ಬೆಳವಣಿಗೆಗಳನ್ನು ಗಮನಿಸುತ್ತೇನೆ ಮತ್ತು ತಂತ್ರಜ್ಞಾನದ ಆಧುನಿಕ ನವೀಕರಣಗಳ ಬಗ್ಗೆಯೂ ತಿಳಿದುಕೊಳ್ಳುತ್ತಿರುತ್ತೇನೆ' ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

9 ತಿಂಗಳ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್‌, ಬುಚ್‌ ವಿಲ್ಮೋರ್‌ ಸೇರಿದಂತೆ ನಾಲ್ವರು ಗಗನಯಾನಿಗಳು ಸುರಕ್ಷಿತವಾಗಿ ಇಂದು ಮುಂಜಾನೆ 3.37ರ ಸುಮಾರಿಗೆ (ಭಾರತೀಯ ಕಾಲಮಾನ) ಫ್ಲೋರಿಡಾದ ಕರಾವಳಿಗೆ ಬಂದಿಳಿದ್ದಾರೆ.

ಕಳೆದ ವರ್ಷ ಜೂನ್‌ 5ರಂದು ಬೋಯಿಂಗ್‌ನ ಸ್ಟಾರ್‌ಲಿಂಕ್‌ ಗಗನನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್‌) ತೆರಳಿದ್ದ ಕ್ರೂ–9 ಮಿಷನ್‌ನ ಸಿಬ್ಬಂದಿ ಸುನಿತಾ ಮತ್ತು ಬುಚ್‌, ಗಗನನೌಕೆಯಲ್ಲಿ ತಲೆದೋರಿದ ತಾಂತ್ರಿಕ ದೋಷದಿಂದಾಗಿ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಳ್ಳಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.