ADVERTISEMENT

ಅಯೋಧ್ಯೆ ಪ್ರಕರಣ: ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 5:22 IST
Last Updated 17 ಜನವರಿ 2019, 5:22 IST
   

ನವದೆಹಲಿ: ರಾಮ ಜನ್ಮಭೂಮಿ ಮತ್ತುಬಾಬ್ರಿ ಮಸೀದಿ ಭೂ ವಿವಾದವನ್ನು ತಕ್ಷಣವಿಚಾರಣೆ ನಡೆಸಲು ಸುಪ್ರೀಂಕೋರ್ಟ್ಸೋಮವಾರ ನಿರಾಕರಿಸಿತು. ‘ಜನವರಿ ಮೊದಲವಾರದಲ್ಲಿ ನ್ಯಾಯಾಲಯವು ವಿಚಾರಣೆ ಆರಂಭಿಸಲಿದೆ’ ಎಂದು ತನ್ನ ಹಿಂದಿನ ನಿಲುವನ್ನು ಪುನರುಚ್ಚರಿಸಿತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಎಸ್‌.ಕೆ.ಕೌಲ್ ಅವರಿದ್ದ ನ್ಯಾಯಪೀಠವು ‘ಜನವರಿಯಲ್ಲಿ ವಿಚಾರಣೆ ನಡೆಸಲು ಸೂಕ್ತ ನ್ಯಾಯಪೀಠಕ್ಕೆ ಈಗಾಗಲೇ ಸೂಚಿಸಲಾಗಿದೆ’ ಎಂದು ಹೇಳಿತು.

‘ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆ. ಜನವರಿಯಲ್ಲಿ ಮನವಿಗಳ ವಿಚಾರಣೆ ನಡೆಯಲಿದೆ. ಅನುಮತಿ ನಿರಾಕರಿಸಲಾಗಿದೆ’ (We have already passed the order. The appeals are coming up in January. Permission declined) ಎಂದು ಹೇಳುವ ಮೂಲಕ ಭೂವಿವಾದದ ಶೀಘ್ರ ವಿಚಾರಣೆಗಾಗಿ ವಕೀಲ ಬರುಣ್‌ ಕುಮಾರ್ ಸಿನ್ಹಾ ಅವರ ಮೂಲಕ ಅಖಿಲ ಭಾರತ ಹಿಂದೂ ಮಹಾಸಭಾನ್ಯಾಯಪೀಠ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು.

ADVERTISEMENT

ಉತ್ತರ ಪ್ರದೇಶ ಸರ್ಕಾರ ಮತ್ತು ರಾಮ್‌ ಲಲ್ಲಾ ಪಂಥವನ್ನು ಪ್ರತಿನಿಧಿಸಿದಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ ಅವರು ಸಹ ‘ಈ ಪ್ರಕರಣ ಬಹುಕಾಲದಿಂದ ಬಾಕಿ ಇದೆ. ತ್ವರಿತ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದ್ದರು.

‘ಮಸೀದಿಯು ಇಸ್ಲಾಂ ಧರ್ಮದ ಅವಿಭಾ‌ಜ್ಯ ಅಂಗವಲ್ಲ’ ಎಂದುಅಲಹಾಬಾದ್ ಹೈಕೋರ್ಟ್ 1994ರಲ್ಲಿ ನೀಡಿದ್ದ ತೀರ್ಪಿನ ಮರುಪರಿಶೀಲನೆ ಅರ್ಜಿಯನ್ನುಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು 2:1 ಬಹುಮತದ ತೀರ್ಪಿನ ಮೂವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠವು ಈ ಹಿಂದೆ ನಿರಾಕರಿಸಿತ್ತು. ಅಯೋಧ್ಯೆ ಭೂ ವಿವಾದ ವಿಚಾರಣೆಯ ಸಂದರ್ಭ ಈ ಮನವಿ ಕೇಳಿಬಂದಿತ್ತು.

ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾನೇತೃತ್ವದ ನ್ಯಾಯಪೀಠವು, ‘ಇದು ಸಿವಿಲ್ ಪ್ರಕರಣ. ಸಿವಿಲ್ ಪ್ರಕರಣಗಳನ್ನು ಸಾಕ್ಷ್ಯಗಳ ಆಧಾರದ ಮೇಲೆ ವಿಲೇವಾರಿ ಮಾಡಲಾಗುವುದು. ಹಿಂದಿನ ತೀರ್ಪು ಈ ಪ್ರಕರಣದಲ್ಲಿ ಯಾವುದೇ ಪ್ರಸ್ತುತತೆ ಹೊಂದಿಲ್ಲ’ ಎಂದು ಹೇಳಿತ್ತು.

ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾ ನಡುವೆ ಅಯೋಧ್ಯೆಯ ವಿವಾದಿನ ಭೂಮಿಯನ್ನು ಹಂಚಿಕೆ ಮಾಡಿಕೊಟ್ಟ ಅಲಹಾಬಾದ್ ಹೈಕೋರ್ಟ್ ತೀರ್ಪು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ 14 ಅರ್ಜಿಗಳು ದಾಖಲಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.