
ಸುಪ್ರೀಂ ಕೋರ್ಟ್
ನವದೆಹಲಿ: ಕಳೆದ 12 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ಎಂಬವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ನಿಲ್ಲಿಸಿ, ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ರೋಗಿಯ ತಂದೆ ಅಶೋಕ್ ರಾಣಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪೋಷಕರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದೆ.
2013ರಲ್ಲಿ ಕಟ್ಟಡದ ನಾಲ್ಕನೇ ಹಂತದಿಂದ ಕೆಳಗೆ ಹರೀಶ್ ಬಿದ್ದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಲ್ಲಿಂದ ಇಲ್ಲಿಯವರೆಗೂ ಅವರು ಕೋಮಾ ಸ್ಥಿತಿಯಲ್ಲಿಯೇ ಇದ್ದಾರೆ. ಹರೀಶ್ ಅವರ ಆರೋಗ್ಯ ಸ್ಥಿತಿಯ ಕುರಿತು ಏಮ್ಸ್‌ನ ತಜ್ಞ ವೈದ್ಯರಿದ್ದ ‘ವೈದ್ಯಕೀಯ ಮಂಡಳಿ’ ನೀಡಿದ ಎರಡನೇ ಹಂತದ ವರದಿಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಅವಲೋಕಿಸಿತು.
‘ವರದಿಯನ್ನು ನೋಡಿದರೆ, ತೀವ್ರ ದುಃಖವಾಗುತ್ತದೆ. ಹರೀಶ್ ಅವರ ಪೋಷಕರನ್ನು 2026ರ ಜನವರಿ 13ರಂದು ಭೇಟಿ ಮಾಡುತ್ತೇವೆ’ ಎಂದು ಪೀಠ ಗುರುವಾರ ಹೇಳಿತು. ಹರೀಶ್ ಅವರ ಆರೋಗ್ಯ ಸ್ಥಿತಿಯು ಸುಧಾರಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಮೊದಲ ಹಂತದ ವೈದ್ಯಕೀಯ ವರದಿ ಕೂಡ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.