
ಸುಪ್ರೀಂ ಕೋರ್ಟ್
ನವದೆಹಲಿ: ಅಪರಾಧದ ಸ್ವರೂಪ ಮತ್ತು ಕಾನೂನಿನ ಸ್ವರೂಪವನ್ನು ಲೆಕ್ಕಿಸದೆ, ಬಂಧನಕ್ಕೊಳಗಾದ ಪ್ರತಿಯೊಬ್ಬ ವ್ಯಕ್ತಿಗೂ ಬಂಧನದ ಕಾರಣಗಳನ್ನು ಲಿಖಿತವಾಗಿ ಮತ್ತು ಅವರು ಅರ್ಥ ಮಾಡಿಕೊಳ್ಳುವ ಭಾಷೆಯಲ್ಲಿ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ನೀಡಿದ ತನ್ನ ಮಹತ್ವದ ತೀರ್ಪಿನಲ್ಲಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸೀಹ್ ಅವರ ಪೀಠವು ಈ ಆದೇಶವನ್ನು ನೀಡಿದೆ.
ಅದಾಗ್ಯೂ, ಬಂಧನಕ್ಕೆ ಮೊದಲು ಅಥವಾ ನಂತರ ತಕ್ಷಣವೆ ಬಂಧನಕ್ಕೆ ಕಾರಣಗಳನ್ನು ಲಿಖಿತವಾಗಿ ಒದಗಿಸದಿದ್ದರೆ, ಸರಿಯಾದ ಸಮಯದೊಳಗೆ ಮತ್ತು ಬಂಧನಕ್ಕೊಳಗಾದ ವ್ಯಕ್ತಿಯನ್ನು ಯಾವುದೇ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಎರಡು ಗಂಟೆಗಳ ಮೊದಲು ಲಿಖಿತವಾಗಿ ಒದಗಿಸಿದರೆ ಆದೇಶದ ಉಲ್ಲಂಘನೆ ಮಾಡಿದಂತೆ ಆಗುವುದಿಲ್ಲ ಎಂದು ಹೇಳಿದೆ.
2024ರ ಜುಲೈನಲ್ಲಿ ಮುಂಬೈನಲ್ಲಿ ನಡೆದ ಬಿಎಂಡಬ್ಲ್ಯೂ ‘ಹಿಟ್ ಆ್ಯಂಡ್ ರನ್’ ಘಟನೆಗೆ ಸಂಬಂಧಿಸಿದ ಮಿಹಿರ್ ರಾಜೇಶ್ ಶಾ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.