ADVERTISEMENT

ವಾಂಗ್ಚೂಕ್‌ ಆರೋಗ್ಯ ಹದಗೆಟ್ಟಿದೆ, ಬಂಧನದ ಕುರಿತು ಯೋಚಿಸಿ: ಸುಪ್ರೀಂ ಕೋರ್ಟ್‌

ಪಿಟಿಐ
Published 4 ಫೆಬ್ರುವರಿ 2026, 15:05 IST
Last Updated 4 ಫೆಬ್ರುವರಿ 2026, 15:05 IST
ಸೋನಮ್‌ ವಾಂಗ್ಚೂಕ್‌
ಸೋನಮ್‌ ವಾಂಗ್ಚೂಕ್‌   

ನವದೆಹಲಿ: ‘ಪರಿಸರ ಕಾರ್ಯಕರ್ತ ಸೊನಮ್‌ ವಾಂಗ್ಚೂಕ್‌ ಅವರ ಆರೋಗ್ಯವು ತೀರಾ ಹದಗೆಟ್ಟಿದೆ. ಆದ್ದರಿಂದ, ಅವರ ಬಂಧನದ ಕುರಿತು ಇನ್ನೊಮ್ಮೆ ಯೋಚಿಸಿ’ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ಆಗ್ರಹಿಸಿದೆ.

‘ವಾಂಗ್ಚೂಕ್ ಅವರ ಆರೋಗ್ಯ ಕುರಿತ ವರದಿ ನೋಡಿದ್ದೇವೆ. ಅವರ ಆರೋಗ್ಯವು ತೀರಾ ಹದಗೆಟ್ಟಿದೆ’ ಎಂದು ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌ ಮತ್ತು ಪಿ.ಬಿ. ವರಾಳೆ ಅವರ ಪೀಠವು ಅಭಿಪ್ರಾಯಪಟ್ಟಿತು.

‘ಎಲ್ಲ ಸಾಕ್ಷ್ಯಗಳು, ವಾದ–ಪ್ರತಿವಾದಗಳು, ಕಾನೂನಿನ ವಿಚಾರಗಳು ಎಲ್ಲವೂ ಸರಿ. ಆದರೆ, ಆರೋಗ್ಯದ ಕುರಿತು ಒಮ್ಮೆ ಯೋಚಿಸಿ. ವಯೋಸಹಜ ಆರೋಗ್ಯ ಸಮಸ್ಯೆ ಇರಬಹುದು ಅಥವಾ ಬೇರೆಯದೇ ಇರಬಹುದು. ಇನ್ನೊಮ್ಮೆ ಈ ಬಗ್ಗೆ ಯೋಚಿಸಬಹುದೇ?’ ಎಂದು ಪೀಠವು ಕೇಂದ್ರ ಸರ್ಕಾರವನ್ನು ಕೇಳಿತು.

ADVERTISEMENT

ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ಪ್ರತಿಕ್ರಿಯಿಸಿ, ‘ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.