ಕಣ್ಣೂರು: ಕೇಂದ್ರ ಸಚಿವ ಸುರೇಶ್ ಗೋಪಿ ಅವರು ತಮ್ಮ ಸ್ಥಾನವನ್ನು ತೊರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನೂತನವಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಸದಸ್ಯ ಸಿ.ಸದಾನಂದನ್ ಮಾಸ್ಟರ್ ಅವರನ್ನು ತಮ್ಮ ಸ್ಥಾನಕ್ಕೆ ನೇಮಕ ಮಾಡಬೇಕೆಂಬ ಶಿಫಾರಸನ್ನೂ ಅವರು ಭಾನುವಾರ ಮುಂದಿಟ್ಟರು.
ಗೋಪಿ ಅವರು ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಖಾತೆ ಸಚಿವವಾಗಿದ್ದಾರೆ.
ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ‘ನನ್ನನ್ನು ತೆಗೆದ ಮೇಲೆ ಸದಾನಂದನ್ ಅವರನ್ನು ಸಚಿವರನ್ನಾಗಿ ನೇಮಕ ಮಾಡಬೇಕು. ಇದು ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಲಿದೆ ಎಂದು ನಾನು ನಂಬುತ್ತೇನೆ’ ಎಂದರು. ಸಭೆಯಲ್ಲಿ ಸದಾನಂದನ್ ಅವರೂ ಭಾಗಿಯಾಗಿದ್ದರು.
‘ಚಿತ್ರರಂಗವನ್ನು ಬಿಟ್ಟು ಮಂತ್ರಿಯಾಗಬೇಕು ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ. ಸದಾನಂದನ್ ಅವರ ‘ಸಂಸದ’ ಕಚೇರಿಯು ಶೀಘ್ರವೇ ‘ಸಚಿವರ ಕಚೇರಿ’ಯಾಗಿ ಬದಲಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದೂ ಗೋಪಿ ಹೇಳಿದರು.
ಸದಾನಂದನ್ ಅವರು 2016ರಲ್ಲಿ ಬಿಜೆಪಿ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.