ADVERTISEMENT

ಸುಶಾಂತ್‌ ಸಿಂಗ್‌ ಪ್ರಕರಣ: ತನಿಖಾಧಿಕಾರಿ ಕ್ವಾರಂಟೈನ್‌ ಮುಕ್ತ

ಪಿಟಿಐ
Published 7 ಆಗಸ್ಟ್ 2020, 15:29 IST
Last Updated 7 ಆಗಸ್ಟ್ 2020, 15:29 IST
ಸುಶಾಂತ್‌
ಸುಶಾಂತ್‌   

ಮುಂಬೈ:ನಟ ಸುಶಾಂತ್ ಸಿಂಗ್ ಪ್ರಕರಣದ ತನಿಖೆಗಾಗಿ ಮುಂಬೈಗೆ ಬಂದಿದ್ದಬಿಹಾರದ‌ ಐಪಿಎಸ್ ಅಧಿಕಾರಿ ವಿನಯ್‌ ತಿವಾರಿ ಅವರನ್ನು ಕ್ವಾರಂಟೈನ್‌ನಿಂದ ಮುಕ್ತಗೊಳಿಸಲಾಗಿದ್ದು,ಅವರ ರಾಜ್ಯಕ್ಕೆ ತೆರಳಲು ಅನುಮತಿ ನೀಡಲಾಗಿದೆಎಂದು ‌‌‌ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ತಿಳಿಸಿದೆ.

‘ಐಪಿಎಸ್‌ ಅಧಿಕಾರಿ ವಿನಯ್‌ ತಿವಾರಿ ಅವರಿಗೆ ಕ್ವಾರಂಟೈನ್‌ ಶಿಷ್ಟಾಚಾರದಿಂದ ವಿನಾಯಿತಿ ನೀಡಬೇಕು. ಅವರು ಮರಳಿ ಕರ್ತವ್ಯಕ್ಕೆ ಹಾಜರಾಗಲು ಅನುಕೂಲ ಕಲ್ಪಿಸಬೇಕು’ ಎಂದು ‌ಬಿಹಾರ ಪೊಲೀಸ್‌ ಮಹಾನಿರ್ದೇಶಕರು, ಮುಂಬೈ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದರು. ಅದರ ಮರುದಿನವೇ ಬಿಎಂಸಿ ಈ ಕ್ರಮ ತೆಗೆದುಕೊಂಡಿದೆ.

ಡಿಜಿಟಲ್‌ ವೇದಿಕೆಗಳನ್ನು ಬಳಸಿಕೊಂಡು ಪ್ರಕರಣದ ತನಿಖೆ ನಡೆಸುವಂತೆ ಬಿಹಾರ ಪೊಲೀಸರಿಗೆ ಬಿಎಂಸಿ ಸಲಹೆ ನೀಡಿದೆ.

ADVERTISEMENT

ಈ ಸಂಬಂಧ ಬಿಹಾರದ ಪೊಲೀಸ್‌ ಮಹಾನಿರ್ದೇಶಕರಿಗೆ, ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ‌ ಪತ್ರ ಬರೆದಿದ್ದು, ‘ಹಿರಿಯ ಅಧಿಕಾರಿಯೊಬ್ಬರು ಮಹಾರಾಷ್ಟ್ರಕ್ಕೆ ಬರುವ ಮುನ್ನ ಕೋವಿಡ್ ಕ್ವಾರಂಟೈನ್ ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟ ಅರಿವು ಹೊಂದಿಲ್ಲದೇ‌ ಇದ್ದುದು ದುರದೃಷ್ಟಕರ. ‌‌ಮಹಾರಾಷ್ಟ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಅನುಸಾರ ಅಲ್ಪಾವಧಿಗೆ (ಒಂದು ವಾರಕ್ಕಿಂತ ಕಡಿಮೆ) ರಾಜ್ಯಕ್ಕೆ ಬರುವ ಪ್ರಯಾಣಿಕರು ಸಂಪೂರ್ಣ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರೆ ಮಾತ್ರವೇ ಪ್ರತ್ಯೇಕವಾಸದಿಂದ ವಿನಾಯಿತಿ ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.

‘ತಿವಾರಿ ಅವರನ್ನು ಪ್ರತ್ಯೇಕವಾಸದಿಂದ ಬಿಡುಗಡೆ ಮಾಡುವಂತೆ ಬಿಹಾರ ಪೊಲೀಸರಿಂದ ಮನವಿ ಬಂದಿತ್ತು. ಜೊತೆಗೆಅಲ್ಪಾವಧಿಗೆ ರಾಜ್ಯಕ್ಕೆ ಬರುವವರಿಗೆ ವಿನಾಯಿತಿಯೂ ಇರುವುದನ್ನು ಪರಿಗಣಿಸಿ, ಕೆಲವು ಷರತ್ತುಗಳೊಂದಿಗೆ ತಿವಾರಿ ಅವರನ್ನು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಐಪಿಎಸ್ ಅಧಿಕಾರಿ ರಿಟರ್ನ್ ಟಿಕೆಟ್ ವಿವರಗಳನ್ನು ಹೆಚ್ಚುವರಿ ನಗರಸಭೆ ಆಯುಕ್ತರ ಕಚೇರಿಗೆ ನೀಡಬೇಕು. ಸೋಂಕು ತಡೆಯ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ನಿಲ್ದಾಣಕ್ಕೆ ಖಾಸಗಿ ಕಾರಿನಲ್ಲಿ ಪ್ರಯಾಣಿಸಲು ತಿಳಿಸಲಾಗಿದೆ. ಅಗತ್ಯವಿರುವ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ’ ಎಂದರು.

ಬಿಎಂಸಿ ಅಧಿಕಾರಿಗಳು ತಿವಾರಿ‌ ಅವರ ಕೈಗೆ ಕ್ವಾರಂಟೈನ್‌ ಮುದ್ರೆ ಹಾಕಿ ಗೋರೆಗಾಂವ್‌ನಲ್ಲಿರುವ ಎಸ್‌ಆರ್‌ಪಿಎಫ್‌ನ ಅತಿಥಿ ಗೃಹದಲ್ಲಿ 14 ದಿನಗಳ ಕಾಲ ಸ್ವಯಂ ಪ್ರತ್ಯೇಕವಾಸದಲ್ಲಿರಲು ಸೂಚಿಸಿದ್ದರು. ಇದಕ್ಕೆ ವ್ಯಾಪಕಟೀಕೆ ವ್ಯಕ್ತವಾಗಿತ್ತು.

‘ಸುಶಾಂತ್‌ಮನೋಚಿಕಿತ್ಸಾ ತಜ್ಞರ ವಿರುದ್ಧ ಆರೋಪ’

ಮುಂಬೈ:ಮನೋಚಿಕಿತ್ಸಾ ತಜ್ಞ ಸುಸಾನ್‌ ವಾಕರ್‌ ವೊಫತ್‌ ಅವರು ನಟಸುಶಾಂತ್‌ ಸಿಂಗ್‌ ಮಾನಸಿಕ ಆರೋಗ್ಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವ ಮೂಲಕ ಕಾನೂನು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದುಬಿಜೆಪಿ ಮುಖಂಡ ಆಶಿಶ್ ಶೆಲಾರ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.